ಕರ್ನಾಟಕ

karnataka

By

Published : Jan 8, 2020, 10:19 AM IST

ETV Bharat / sitara

ಲೂಸ್​​ ಮಾದ ಯೋಗಿ ಸಿನಿಮಾಕ್ಕೆ ಚಾಲೆಂಜಿಂಗ್​ ಸ್ಟಾರ್​ ಸಂಭಾಷಣೆ

ದರ್ಶನ್, ನಟ ಲೂಸ್ ಮಾದ ಯೋಗಿ ಅವರ ಮೇಲಿನ ಸ್ನೇಹಕ್ಕೆ '9ನೇ ದಿಕ್ಕು' ಸಿನಿಮಾದ ಕೆಲವು ಸಂಭಾಷಣೆಗೆ ದನಿಯಾಗಿದ್ದಾರೆ. ಈ ಸಿನಿಮಾವನ್ನು ದಯಾಳ್​ ಪದ್ಮನಾಭನ್​ ನಿರ್ದೇಶನ ಮಾಡಿದ್ದಾರೆ.

darshan give voice to 9ne dikku movie
ಲೂಸ್​​ ಮಾದ ಯೋಗಿ ಸಿನಿಮಾಕ್ಕೆ ದನಿಯಾದ ಚಾಲೆಂಚಿಂಗ್​ ಸ್ಟಾರ್​

ಪ್ರೀತಿಗೆ ಶರಣಾಗುವ ದಾಸದರ್ಶನ್, ನಟ ಲೂಸ್ ಮಾದ ಯೋಗಿ ಅವರ ಮೇಲಿನ ಸ್ನೇಹಕ್ಕೆ '9ನೇ ದಿಕ್ಕು' ಸಿನಿಮಾದ ಕೆಲವು ಸಂಭಾಷಣೆಗೆ ದನಿಯಾಗಿದ್ದಾರೆ. ದರ್ಶನ್ ಈ ಹಿಂದೆ ಸಹ ಕೆಲವು ಸಿನಿಮಾಗಳ ಸಂಭಾಷಣೆಗೆ ವಾಯ್ಸ್​​ ನೀಡಿದ್ದರು.

ಇನ್ನು ದಯಾಳ್​​ ಪದ್ಮನಾಭನ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ '9ನೇ ದಿಕ್ಕು' ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಡಿ ಪಿಕ್ಚರ್ಸ್ ಹಾಗೂ ಕೆ 9 ಸ್ಟುಡಿಯೋದಲ್ಲಿ ನಿರ್ಮಾಣವಾಗುತ್ತಿರುವ '9ನೇ ದಿಕ್ಕು' ಸಿನಿಮಾ ಕಳೆದ ಸೆಪ್ಟೆಂಬರ್​​ನಲ್ಲಿ ಸೆಟ್ಟೇರಿದೆ. ಇನ್ನು ಇದೇ 15ರಂದು ಸಿನಿಮಾದ ಟೀಸರ್​ ಕೂಡ ಬಿಡುಗಡೆಯಾಗಲಿದ್ದು, ಟೀಸರ್​ನಲ್ಲಿಯೂ ದರ್ಶನ್​ ಧ್ವನಿ ಕೇಳಿಸಲಿದೆಯಂತೆ.

ABOUT THE AUTHOR

...view details