ಇತ್ತೀಚಿಗಷ್ಟೆ ಟ್ರೇಲರ್ ಹಾಗೂ ಆಡಿಯೋ ರಿಲೀಸ್ ಕಾರ್ಯಕ್ರಮದ ಪಾಸ್ ವಿಚಾರವಾಗಿ 'ಕುರುಕ್ಷೇತ್ರ' ನಿರ್ಮಾಪಕ ಮುನಿರತ್ನ ಮೇಲೆ ಡಿ ಬಾಸ್ ಪಡೆ ಅಸಮಾಧಾನಗೊಂಡಿತ್ತು. ಈಗ ಮತ್ತೆ ದಾಸನ ಫ್ಯಾನ್ಸ್ ಬೇಸರಗೊಂಡಿದ್ದಾರೆ.
ಕುರುಕ್ಷೇತ್ರ ಪ್ರಮೋಷನ್ ವಿಚಾರ...'ಡಿ ಬಾಸ್' ಪಡೆ ಮನವಿಗೆ ಸ್ಪಂದಿಸ್ತಾರಾ ನಿರ್ಮಾಪಕ ಮುನಿರತ್ನ ? - ಕುರುಕ್ಷೇತ್ರ
ಕುರುಕ್ಷೇತ್ರದ ಪ್ರಮೋಷನ್ ವಿಚಾರವಾಗಿ ಡಿ ಬಾಸ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಈ ಚಿತ್ರಕ್ಕೆ ಸರಿಯಾದ ಪ್ರಚಾರ ಸಿಗುತ್ತಿಲ್ಲ ಎಂದು ಚಿತ್ರತಂಡದ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.
ಸಾರಥಿಯ 50 ನೇ ಚಿತ್ರ 'ಕುರುಕ್ಷೇತ್ರ' ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಹೇಳಿ ಕೇಳಿ ಇದು ಪ್ಯಾನ್ ಇಂಡಿಯಾ ಸಿನಿಮಾ. ಚಿತ್ರ ಎಲ್ಲರಿಗೂ ರೀಚ್ ಆಗಬೇಕಂದ್ರೆ ಭರ್ಜರಿ ಪ್ರಮೋಷನ್ ಬೇಕೇ ಬೇಕು. ಆದರೆ, ಚಿತ್ರತಂಡದಿಂದ ಹೇಳಿಕೊಳ್ಳುವಂತ ಪ್ರಚಾರ ನಡೆಯುತ್ತಿಲ್ಲ. ಪಂಚ ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಕುರುಕ್ಷೇತ್ರಕ್ಕೆ ದೊಡ್ಡದಾಗಿ ಪ್ರಮೋಷನ್ ಮಾಡಿ. ಕರ್ನಾಟಕದಲ್ಲಿ ಪ್ರಚಾರದ ಅಗತ್ಯವಿಲ್ಲ, ಇಲ್ಲಿ ಡಿ ಬಾಸ್ ಹೆಸರೇ ಸಾಕು. ದಯವಿಟ್ಟು ಪರಭಾಷೆಯಲ್ಲಾದರೂ ಪ್ರಮೋಷನ್ ಮಾಡಿ ಎಂದು ದರ್ಶನ್ ಅಭಿಮಾನಿಗಳು ಚಿತ್ರತಂಡಕ್ಕೆ ಒತ್ತಾಯಿಸುತ್ತಿದ್ದಾರೆ.
ಇನ್ನು ಬಹುಕೋಟಿ ವೆಚ್ಚದಲ್ಲಿ ತಯಾರಾಗಿರುವ ಕುರುಕ್ಷೇತ್ರ ಆಗಸ್ಟ್ ಮೊದಲ ವಾರದಲ್ಲಿ ತೆರೆಗೆ ಬರುತ್ತಿದೆ. ದರ್ಶನ್, ರವಿಚಂದ್ರನ್, ದಿವಂಗತ ನಟ ಅಂಬರೀಶ್ ಸೇರಿದಂತೆ ಬಹುತಾರಾಗಣದ ಈ ಚಿತ್ರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.