ಕರ್ನಾಟಕ

karnataka

ETV Bharat / sitara

'ರಾಬರ್ಟ್' ಸಿನಿಮಾ ವಿವಾದ...ಫಿಲ್ಮ್ ಚೇಂಬರ್ ಅಧ್ಯಕ್ಷರ ಜೊತೆ ದರ್ಶನ್ ಚರ್ಚೆ...! - Darshan came to film chamber

Darshan
ದರ್ಶನ್

By

Published : Jan 29, 2021, 12:52 PM IST

Updated : Jan 29, 2021, 1:31 PM IST

12:47 January 29

ಫಿಲ್ಮ್​ ಚೇಂಬರ್​​​ಗೆ ಆಗಮಿಸಿದ ನಟ ದರ್ಶನ್ ಫಿಲ್ಮ್​ ಚೇಂಬರ್ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಇನ್ನಿತರರೊಂದಿಗೆ ಚರ್ಚಿಸಿ ಶೀಘ್ರವೇ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಫಿಲ್ಮ್ ಚೇಂಬರ್ ಅಧ್ಯಕ್ಷರ ಜೊತೆ ದರ್ಶನ್ ಚರ್ಚೆ

'ರಾಬರ್ಟ್' ಸಿನಿಮಾ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ನಟ ದರ್ಶನ್ ಹಾಗೂ ಚಿತ್ರದ ನಿರ್ಮಾಪಕ ಉಮಾಪತಿ ಫಿಲ್ಮ್ ಚೇಂಬರ್ ಕಚೇರಿಗೆ ಆಗಮಿಸಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ಫಿಲ್ಮ್​ ಚೇಂಬರ್​​ನಲ್ಲಿ ಚರ್ಚಿಸಿದ್ದಾರೆ.

ತರುಣ್ ಸುಧೀರ್​ ನಿರ್ದೇಶನದ 'ರಾಬರ್ಟ್' ಸಿನಿಮಾವನ್ನು ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲು, ಅಲ್ಲಿನವರು ಬಿಡುತ್ತಿಲ್ಲ ಎಂಬ ವಿಚಾರಕ್ಕೆ, ಸಂಬಂಧಿಸಿದಂತೆ ಮಾತನಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ  ಆಗಮಿಸಿದ ನಟ‌ ದರ್ಶನ್ ಹಾಗೂ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ, ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಫಿಲ್ಮ್ ಚೇಂಬರ್ ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ಗೌರವ ಕಾರ್ಯದರ್ಶಿ ಎನ್. ಎಂ. ಸುರೇಶ್ , ನಿರ್ಮಾಪಕ ಅಣಜಿ ನಾಗರಾಜ್ ಹಾಗೂ ಇನ್ನಿತರೊಂದಿಗೆ ಚರ್ಚಿಸಿ ಈ ವಿವಾದವನ್ನು ಶೀಘ್ರವೇ ಬಗೆಹರಿಸಲು ಮನವಿ ಮಾಡಿದ್ದಾರೆ. 

Last Updated : Jan 29, 2021, 1:31 PM IST

ABOUT THE AUTHOR

...view details