ಕರ್ನಾಟಕ

karnataka

ETV Bharat / sitara

ವ್ಯವಹಾರಗಳಿಂದ ಮ್ಯಾನೇಜರ್ ದೂರವಿಟ್ಟ 'ಡಿಬಾಸ್', ಇದು ಶ್ರೀನಿವಾಸ್ ಸ್ಪಷ್ಟನೆ - ದರ್ಶನ್​ ಮ್ಯಾನೇಜರ್​ ಬದಲಾವಣೆ

ನಟ ದರ್ಶನ್​ಗೆ ಮ್ಯಾನೇಜರ್​ ಆಗಿದ್ದ ಶ್ರೀನಿವಾಸ್ ಅವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಕೆಲಸಗಳಿಂದ ದೂರ ಇಡಲಾಗಿದೆ.

ಮ್ಯಾನೇಜರ್​ ಶ್ರೀನಿವಾಸ್​ ಜೊತೆ ದರ್ಶನ್​​​​

By

Published : Oct 17, 2019, 10:27 AM IST

Updated : Oct 17, 2019, 1:26 PM IST

ಬಾಕ್ಸ್ ಆಫೀಸು ಸುಲ್ತಾನ ಡಿ ಬಾಸ್ ದರ್ಶನ್ ತಮ್ಮ ಮ್ಯಾನೇಜರ್​ ಬದಲಾವಣೆ ಮಾಡಿದ್ದಾರೆ. ಇಷ್ಟು ದಿನ ದರ್ಶನ್​ಗೆ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಕೆಲಸಗಳಿಂದ ದೂರ ಇಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದರ್ಶನ್​, ಶ್ರೀನಿವಾಸ್​ ಮತ್ತು ನನ್ನ ವಿಚಾರವಾಗಿ ಯಾರೂ ಶ್ರೀನಿವಾಸ್​ ಅವರನ್ನು ಸಂಪರ್ಕ ಮಾಡುವುದು ಬೇಡ ಎಂದಿದ್ದಾರೆ.

ಡಿ ಬಾಸ್ ತಂಡದಲ್ಲಿ ಬಹಳ ವರ್ಷಗಳ ಕಾಲ ಇದ್ದ ಮಲ್ಲಿಕಾರ್ಜುನ್ (ಮೊದಲಸಲಾ ಸಿನಿಮಾ ನಿರ್ದೇಶಕ) ಸಹ ಕಳೆದ ವರ್ಷದಿಂದ ನಾಪತ್ತೆಯಾಗಿದ್ದಾರೆ. ಮಲ್ಲಿಕಾರ್ಜುನ್ ಅವರನ್ನು ತೂಗುದೀಪ ವಿತರಣೆ ಸಂಸ್ಥೆಗೆ ನೇಮಕ ಮಾಡಲಾಗಿತ್ತು. ಅವರಿಂದ ವ್ಯವಹಾರದಲ್ಲಿ ದರ್ಶನ್​ಗೆ ಅಪಾರ ನಷ್ಟವಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು.

ಈಗ ದರ್ಶನ್​ ಜೊತೆಯಿದ್ದ ಮ್ಯಾನೇಜರ್​ ಶ್ರೀನಿವಾಸ್ ಕೂಡಾ ಬದಲಾವಣೆಯಾಗಿದ್ದು ಅಭಿಮಾನಿಗಳ ಪೇಜ್​ನಲ್ಲಿ ತಿಳಿಸಲಾಗಿದೆ. ಆದರೆ ಇದುವರೆಗೂ ದರ್ಶನ್, ಮಲ್ಲಿಕಾರ್ಜುನ್ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

'ದರ್ಶನ್​ ಜೊತೆ ಮನಸ್ತಾಪ ಬಂದಿದ್ದು ನಿಜ'

ದರ್ಶನ್​ ಮತ್ತು ನನ್ನ ನಡುವೆ ಕೆಲಸದ ವಿಚಾರವಾಗಿ ಮನಸ್ತಾಪ ಬಂದಿದ್ದು ನಿಜ ಅಂತ ಮ್ಯಾನೇಜರ್​ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಫೇಸ್​ ಬುಕ್​ನಲ್ಲಿ ಬರೆದುಕೊಂಡಿರುವ ಶ್ರೀನಿವಾಸ್​​​, ನಾನು ಕಳೆದ ಸೆಪ್ಟೆಂಬರ್​ 18 ರಿಂದ ದರ್ಶನ್​ ಬಳಿ ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ಯಾರೂ ಸಹ ಇಲ್ಲಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ. ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿಯೇ ಕೆಲಸ ಮಾಡಿಕೊಂಡು ಇದ್ದೇನೆ ಅಂತ ಹೇಳಿದ್ದಾರೆ.

Last Updated : Oct 17, 2019, 1:26 PM IST

ABOUT THE AUTHOR

...view details