ಕರ್ನಾಟಕ

karnataka

By

Published : Oct 23, 2019, 11:07 PM IST

ETV Bharat / sitara

ಸ್ವಿಡ್ಜ​​​ರ್ಲೆಂಡ್​​ನಲ್ಲಿ 'ಒಡೆಯ': ಹಾಡೊಂದರ ಚಿತ್ರೀಕರಣದಲ್ಲಿ ದರ್ಶನ್ ಬ್ಯುಸಿ..!

ಒಂದು ವಾರದ ಕಾಲ ಸ್ವಿಡ್ಜರ್ಲೆಂಡ್​​​ನಲ್ಲಿ 'ಒಡೆಯ' ಚಿತ್ರದ ಶೂಟಿಂಗ್ ಮುಗಿಸಿ ಚಿತ್ರತಂಡ ಬೆಂಗಳೂರಿಗೆ ವಾಪಸ್​ ಆಗಲಿದೆ. ಅಂದುಕೊಂಡಂತೆ ಎಲ್ಲಾ ಕೆಲಸಗಳು ಮುಗಿದರೆ ನವೆಂಬರ್ ಅಥವಾ ಡಿಸೆಂಬರ್​​ನಲ್ಲಿ ಸಿನಿಮಾ ತೆರೆಗೆ ಬರಲಿದೆ.

ಸ್ವಿಡ್ಜ​​​ರ್ಲೆಂಡ್​​ನಲ್ಲಿ 'ಒಡೆಯ' ಹಾಡಿನ ಚಿತ್ರೀಕರಣ

'ಕುರುಕ್ಷೇತ್ರ' ಚಿತ್ರದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಒಡೆಯ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ವೈಲ್ಡ್​ ಲೈಫ್ ಫೋಟೋಗ್ರಫಿಗಾಗಿ ಕೀನ್ಯಾ ತೆರಳಿದ್ದ ದರ್ಶನ್ ಇದೀಗ ಮತ್ತೆ ಸ್ವಿಡ್ಜರ್ಲೆಂಡ್​ಗೆ ತೆರಳಿದ್ದಾರೆ. ಆದರೆ ಇದು ಫೋಟೋಗ್ರಫಿಗಲ್ಲ, 'ಒಡೆಯ' ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ.

ಸ್ವಿಡ್ಜ​​​ರ್ಲೆಂಡ್​​ನಲ್ಲಿ 'ಒಡೆಯ' ಹಾಡಿನ ಚಿತ್ರೀಕರಣ

ಎಂ.ಡಿ. ಶ್ರೀಧರ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಒಡೆಯ' ಸಿ‌ನಿಮಾ ಬಹುತೇಕ ಟಾಕಿ ಪೋಷನ್ ಮುಗಿಸಿದೆ. ಸದ್ಯಕ್ಕೆ ಚಿತ್ರತಂಡ ಸ್ವಿಡ್ಜರ್ಲೆಂಡ್​​​ನಲ್ಲಿ ಟೆಂಟ್ ಹಾಕಿದ್ದು, ಅಲ್ಲಿ ಹಾಡಿನ ಚಿತ್ರೀಕರಣ ಕೂಡಾ ಮುಗಿಸಿದೆ. ಕೆಲವು ದಿನಗಳ ಹಿಂದೆ ಸ್ವಿಡ್ಜರ್ಲೆಂಡ್​​ನ ಹಿಮ ಇರುವ ಲೊಕೇಶನ್​​​ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿತ್ತು. ಇದೀಗ ನಗರದಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಚಿತ್ರತಂಡ ಒಟ್ಟಾಗಿ ಇರುವ ಪೋಟೋಗಳು ರಿವೀಲ್ ಆಗಿವೆ. ಈ ಫೋಟೋದಲ್ಲಿ ದರ್ಶನ್, ಕೊಡಗಿನ ಕುವರಿ ರಾಘವಿ, ನಿರ್ಮಾಪಕ ಸಂದೇಶ್, ಕ್ಯಾಮರಾಮ್ಯಾನ್ ಕೃಷ್ಣಕುಮಾರ್ ಹಾಗೂ ಫಾರಿನ್‌ ಡ್ಯಾನ್ಸರ್​​​​​ಗಳು ಸೇರಿದಂತೆ ಇಡೀ 'ಒಡೆಯ' ಚಿತ್ರತಂಡ ಕ್ಯಾಮರಾಗೆ ಪೋಸ್ ನೀಡಿದೆ. ಇನ್ನು ಒಂದು ವಾರ ಸ್ವಿಡ್ಜರ್ಲೆಂಡ್​​​ನಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ಬೆಂಗಳೂರಿಗೆ ವಾಪಸ್​ ಆಗಲಿದೆ. ಅಂದುಕೊಂಡಂತೆ ಎಲ್ಲ ಕೆಲಸಗಳು ಮುಗಿದರೆ ನವೆಂಬರ್ ಅಥವಾ ಡಿಸೆಂಬರ್​​ನಲ್ಲಿ ಸಿನಿಮಾ ತೆರೆಗೆ ಬರಲಿದೆ.

ಸ್ವಿಡ್ಜ​​​ರ್ಲೆಂಡ್​​ನಲ್ಲಿ 'ಒಡೆಯ' ಚಿತ್ರತಂಡ

For All Latest Updates

TAGGED:

ABOUT THE AUTHOR

...view details