ಹಾವೇರಿಯಲ್ಲಿ ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಅನಾಥಾಶ್ರಮದಲ್ಲಿ ದರ್ಶನ್ ಹುಟ್ಟುಹಬ್ಬ ಆಚರಿದ ಅಭಿಮಾನಿಗಳು - ಹಾವೇರಿಯ ಶಕ್ತಿ ವೃದ್ದಾಶ್ರಮ
ಹಾವೇರಿಯ ಶಕ್ತಿ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಹಾಗೂ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ದರ್ಶನ್ ಜನ್ಮದಿನ ಆಚರಿಸಲಾಗಿದೆ.
![ಅನಾಥಾಶ್ರಮದಲ್ಲಿ ದರ್ಶನ್ ಹುಟ್ಟುಹಬ್ಬ ಆಚರಿದ ಅಭಿಮಾನಿಗಳು darshan birthday in orphanage](https://etvbharatimages.akamaized.net/etvbharat/prod-images/768-512-6250770-thumbnail-3x2-giri.jpg)
ಅನಾಥಾಶ್ರಮದಲ್ಲಿ ದರ್ಶನ್ ಹುಟ್ಟುಹಬ್ಬ ಆಚರಿದ ಅಭಿಮಾನಿಗಳು
ನಗರದ ಶಕ್ತಿ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಹಾಗೂ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ದರ್ಶನ್ ಜನ್ಮದಿನ ಆಚರಿಸಲಾಗಿದೆ. ಅಲ್ಲದೆ ಶಕ್ತಿ ವೃದ್ಧಾಶ್ರಮ ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಒಂದು ತಿಂಗಳಿಗೆ ಆಗುವಷ್ಟು ದವಸ ಧಾನ್ಯಗಳನ್ನು ವಿತರಿಸಲಾಯಿತು.
ಅನಾಥಾಶ್ರಮದಲ್ಲಿ ದರ್ಶನ್ ಹುಟ್ಟುಹಬ್ಬ ಆಚರಿದ ಅಭಿಮಾನಿಗಳು
ಸ್ವಂತ ವಾಹನದಲ್ಲಿ ದವಸ ಧಾನ್ಯಗಳನ್ನು ಹಾಕಿಕೊಂಡು ಬಂದ ಅಭಿಮಾನಿಗಳು, ಎರಡು ಕೇಂದ್ರಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ವೃದ್ಧಾಶ್ರಮದ ಹಿರಿಯ ಜೀವಗಳ ನಡುವೆ ಕಾಲ ಕಳೆದರು. ಅನಾಥ ಮಕ್ಕಳು, ಬುದ್ಧಿಮಾಂದ್ಯ ಮಕ್ಕಳ ಜೊತೆ ಕಾಲ ಕಳೆಯುವ ಮೂಲಕ ದರ್ಶನ್ ಜನ್ಮದಿನವನ್ನ ಆಚರಿಸಿದರು.