ಕರ್ನಾಟಕ

karnataka

ETV Bharat / sitara

ಅಭಿಮಾನಿಗೆ ತೊಂದರೆ ಕೊಟ್ಟ ಬೌನ್ಸರ್​​ ತಲೆಗೆ ಹೊಡೆದ ನಟ ದರ್ಶನ್​​: ವಿಡಿಯೋ ವೈರಲ್​​ - ಬರ್ತ್​​ ಡೇ ದಿನವೇ ಬೌನ್ಸರ್​​ ತಲೆಗೆ ಹೊಡೆದ ನಟ ದರ್ಶನ್​​

ಅಭಿಮಾನಿಗಳು ಸರತಿ ಸಾಲಲ್ಲಿ ನಿಂತು ದಚ್ಚುಗೆ ಶುಭಾಶಯ ಕೋರುತ್ತಿರುವ ವೇಳೆ, ದರ್ಶನ್ ಪಕ್ಕದಲ್ಲೆ ನಿಂತಿದ್ದ ಬೌನ್ಸರ್ ಅಭಿಮಾನಿಯೊಬ್ಬರನ್ನು ಎಳೆದು ಜೋರಾಗಿ ತಳ್ಳಿದರು. ಇದನ್ನು ನೋಡಿದ ದರ್ಶನ್ ಕೋಪಗೊಂಡು ಬೌನ್ಸರ್ ತಲೆಗೆ ಬಾರಿಸಿದ್ದಾರೆ.

darshan beat to bouncer
ಬರ್ತ್​​ ಡೇ ದಿನವೇ ಬೌನ್ಸರ್​​ ತಲೆಗೆ ಹೊಡೆದ ನಟ ದರ್ಶನ್​​ : ವಿಡಿಯೋ ವೈರಲ್​​

By

Published : Feb 16, 2020, 3:42 PM IST

44ನೇ ವಸಂತಕ್ಕೆ ಕಾಲಿಟ್ಟಿರುವ ಡಿಬಾಸ್​​​​ಗೆ ನಾಡಿದ ನಾನಾ ಭಾಗಗಳಿಂದ ಬಂದ ಅಭಿಮಾನಿಗಳು ವಿಶ್​ ಮಾಡುತ್ತಿದ್ದಾರೆ. ಸರತಿ ಸಾಲಿನಲ್ಲಿ ಬಂದು ದರ್ಶನ್​ಗೆ ಶೇಕ್​ ಹ್ಯಾಂಡ್​ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಇದೇ ವೇಳೆ ಅಭಿಮನಿಗಳ ಜೊತೆ ತನ್ನ ಬೌನ್ಸರ್​ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದರ್ಶನ್​ ಬೌನ್ಸರ್​ ತಲೆಗೆ ಹೊಡೆದಿದ್ದಾರೆ.

ಅಭಿಮಾನಿಗಳು ಸರತಿ ಸಾಲಲ್ಲಿ ನಿಂತು ದಚ್ಚುಗೆ ಶುಭಾಶಯ ಕೋರುತ್ತಿರುವ ವೇಳೆ, ದರ್ಶನ್ ಪಕ್ಕದಲ್ಲೆ ನಿಂತಿದ್ದ ಬೌನ್ಸರ್ ಅಭಿಮಾನಿಯೊಬ್ಬರನ್ನು ಎಳೆದು ಜೋರಾಗಿ ತಳ್ಳಿದರು. ಇದನ್ನು ನೋಡಿದ ದರ್ಶನ್ ಕೋಪಗೊಂಡು ಬೌನ್ಸರ್ ತಲೆಗೆ ಬಾರಿಸಿದ್ದಾರೆ. ಹಾಗೂ ಬೌನ್ಸರ್ ಗೆ ಎಚ್ಚರಿಕೆ ನೀಡಿದ್ದಾರೆ. ದೂರದ ಊರಿಂದ ಬರುವ ಅಭಿಮಾನಿಗಳ ಜೊತೆ ಹೀಗೆ ನಡೆದುಕೊಳ್ಳಬಾರದು ಎಂದಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಅಭಿಮಾನಿಗಳ ಮೇಲಿನ ದರ್ಶನ್​ ಗೌರವವನ್ನು ಎಲ್ಲರೂ ಹೊಗಳುತ್ತಿದ್ದಾರೆ.

ABOUT THE AUTHOR

...view details