ಕರ್ನಾಟಕ

karnataka

ETV Bharat / sitara

ಡಿ ಬಾಸ್ ಕಾರ್​ನಲ್ಲಿ​ ರಿಷಬ್​ ಶೆಟ್ಟಿ - Rishab Shetty News

ಹರಿಕಥೆ ಅಲ್ಲಾ... ಗಿರಿಕಥೆ ಸಿನಿಮಾ ಸೆಟ್​​​ಗೆ ಹೋಗಿದ್ದ ದರ್ಶನ್​​​ ಜೊತೆ ರಿಷಬ್​ ಶೆಟ್ಟಿ ಕಾರ್​​​​​​ ಡ್ರೈವ್​ ಹೋಗಿದ್ದಾರೆ. ಈ ಖುಷಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ರಿಷಬ್​​,​ ದರ್ಶನ್​ ಜೊತೆ ಕಾರಿನಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

Darshan and Rishab meet in Mysore
ಡಿಬಾಸ್​​​ ಜೊತೆ ಕಾರ್​​ಡ್ರೈವ್ ಹೋದ್ರು ರಿಷಬ್​ ಶೆಟ್ರು​

By

Published : Dec 4, 2020, 3:22 PM IST

ಸ್ಯಾಂಡಲ್​ವುಡ್​​ ಡಿ ಬಾಸ್​​​ ದರ್ಶನ್, ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿಯನ್ನು ಭೇಟಿಯಾಗಿದ್ದಾರೆ. ಹಾಗಾದ್ರೆ ಇವರಿಬ್ಬರ ಕಾಂಬಿನೇಷನ್​​ನಲ್ಲಿ ಸಿನಿಮಾ ಏನಾದ್ರೂ ಬರ್ತಿದ್ಯಾ ಅಂತ ಅಂದ್ಕೊಂಡ್ರಾ? ಹಾಗೇನು ಇಲ್ಲ.

ನಟ ದರ್ಶನ್​​ ಮತ್ತು ರಿಷಬ್​ ಶೆಟ್ಟಿ

ಸದ್ಯ ಮೈಸೂರಿನಲ್ಲಿ ರಿಷಬ್​ ಶೆಟ್ಟಿ ನಟನೆಯ ಹರಿಕಥೆ ಅಲ್ಲಾ... ಗಿರಿಕಥೆ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಸಲುವಾಗಿ ದರ್ಶನ್​​ ಸಿನಿಮಾ ಸೆಟ್​​ಗೆ ಭೇಟಿ ನೀಡಿ ಮತುಕತೆ ನಡೆಸಿದ್ದಾರೆ. ಮೈಸೂರಿನಲ್ಲಿ ಯಾವುದೇ ಸಿನಿಮಾ ಶೂಟ್​​ ಆದ್ರೂ ಕೂಡ ದರ್ಶನ್​​​ ಶೂಟಿಂಗ್​ ಸೆಟ್​ಗೆ​​ ಭೇಟಿ ಕೊಟ್ಟು ಚಿತ್ರತಂಡಕ್ಕೆ ಶುಭ ಕೋರುತ್ತಾರೆ.

ಸೆಟ್​​​ಗೆ ಹೋಗಿದ್ದ ದರ್ಶನ್​​​ ಜೊತೆ ರಿಷಬ್​ ಶೆಟ್ಟಿ ಕಾರ್​​​​​​ ಡ್ರೈವ್​ ಹೋಗಿದ್ದಾರೆ. ಈ ಖುಷಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ರಿಷಬ್​​,​ ದರ್ಶನ್​ ಜೊತೆ ಕಾರಿನಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ದರ್ಶನ್​ ಕಾರು

ಫೋಟೋಗಳನ್ನು ಹಾಕಿರುವ ಕಿರಿಕ್​ ಪಾರ್ಟಿ ನಿರ್ದೇಶಕ, ನನ್ನ ಡ್ರೀಮ್ ಕಾರ್ ಫಾರ್ಡ್​​​​​ಮುಸ್ಟಾರ್​​​. ನಿನ್ನೆ ಸಂಜೆ ದರ್ಶನ್ ಸರ್ ತಮ್ಮ ಕಾರು ಮುಸ್ಟಾಂಗ್​​ ಜಿ.ಟಿ.ಯಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. ಧನ್ಯವಾದಗಳು ದರ್ಶನ್​​ ಎಂದು ಬರೆದಿದ್ದಾರೆ.

ದರ್ಶನ್​ ಕಾರು
ನಟ ದರ್ಶನ್​​ ಮತ್ತು ರಿಷಬ್​ ಶೆಟ್ಟಿ

ಇನ್ನು ಇತ್ತೀಚೆಗೆ ರಿಷಬ್​ ಅಭಿನಯದ ಹರಿಕಥೆ ಅಲ್ಲಾ... ಗಿರಿಕಥೆ ಚಿತ್ರದಲ್ಲಿ ಬದಲಾವಣೆಯೊಂದು ಆಗಿತ್ತು. ಚಿತ್ರದ ನಿರ್ದೇಶಕ ಗಿರಿಕೃಷ್ಣ ಅನಾರೋಗ್ಯದ ಕಾರಣದಿಂದ ಚಿತ್ರತಂಡದಿಂದ ದೂರ ಉಳಿದಿದ್ದು, ಅವರ ಸ್ಥಾನಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಸೇರಿಕೊಂಡಿದ್ದಾರೆ.

ABOUT THE AUTHOR

...view details