ಕರ್ನಾಟಕ

karnataka

ETV Bharat / sitara

ವಿಷ್ಣುವರ್ಧನ್​ ಪ್ರತಿಮೆ ಧ್ವಂಸ: ಕೆರಳಿದ ದರ್ಶನ್​​​ - ಡಾ. ವಿಷ್ಣುವರ್ಧನ್ ಪ್ರತಿಮೆ

ಡಾ. ವಿಷ್ಣುವರ್ಧನ್ ಪ್ರತಿಮೆಯನ್ನು ರಾತ್ರೋ ರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದು, ಈ ಬಗ್ಗೆ ನಟ ದರ್ಶನ್​​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷ್ಣು ಪ್ರತಿಮೆ ಧ್ವಂಸ : ಕೆರಳಿದ ದರ್ಶನ್​​​
ವಿಷ್ಣು ಪ್ರತಿಮೆ ಧ್ವಂಸ : ಕೆರಳಿದ ದರ್ಶನ್​​​

By

Published : Dec 26, 2020, 5:28 PM IST

ಮಾಗಡಿ ರೋಡ್​​ನ ಟೋಲ್ ಗೇಟ್ ಬಳಿ‌ ಪ್ರತಿಷ್ಠಾಪನೆ ಮಾಡಲಾಗಿದ್ದ ಡಾ. ವಿಷ್ಣುವರ್ಧನ್ ಪ್ರತಿಮೆಯನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದು, ಈ ಬಗ್ಗೆ ನಟ ದರ್ಶನ್​​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವಿಟರ್​ನಲ್ಲಿ ಧ್ವಂಸಗೊಂಡ ಪ್ರತಿಮೆಯ ಫೋಟೋಗಳನ್ನು ಹಾಕಿರುವ ನಟ, ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ. ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರೂ ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದಿದ್ದಾರೆ.

ಇದನ್ನೂ ಓದಿ : ನಮ್ಮದು ಲವ್ ಜಿಹಾದ್ ಕಥೆ ಆಧಾರಿತ ಸಿನಿಮಾ ಅಲ್ಲ: 'ಮುಂಬೈ ಟು ಭಟ್ಕಳ' ತಂಡದ ಸ್ಪಷ್ಟನೆ

ಇನ್ನು ಸಚಿವ ಸೋಮಣ್ಣ ವಿಕೃತಿ ಮೆರೆದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಅಲ್ಲದೇ ಸೋಮಣ್ಣನವರು ವಿಷ್ಣು ಪ್ರತಿಮೆಯನ್ನು ಬೇರೆ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡೋದಕ್ಕೂ ಸೂಚಿಸಿದ್ದಾರೆ.

ABOUT THE AUTHOR

...view details