ಕನ್ನಡ ಚಿತ್ರರಂಗದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಕೂಡ ಮದುವೆಗಳ ಪರ್ವ ಶುರುವಾಗಿದೆ. ಸದ್ಯ ಜಗ್ವಾರ್ಸ್ಟಾರ್ ನಿಖಿಲ್ ಕುಮಾರಸ್ವಾಮಿ ಮದುವೆ ವಿಷಯ ಸ್ಯಾಂಡಲ್ವುಡ್ನಲ್ಲಿ ಬಿಗ್ ನ್ಯೂಸ್ ಆಗಿದೆ. ಇದರ ಬೆನ್ನಲ್ಲೇ ಮದರಂಗಿ ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಐದು ವರ್ಷದಿಂದ ನಟಿಯೊಬ್ಬರನ್ನು ಲವ್ ಮಾಡುತ್ತಿರುವ ವಿಷಯವನ್ನು ಹೊರ ಹಾಕಿದ್ದಾರೆ.
ತನ್ನ ಮದುವೆ ಬಗ್ಗೆ ಮಾಹಿತಿ ಕೊಟ್ಟ ನಟ ಡಾರ್ಲಿಂಗ್ ಕೃಷ್ಣ - ಡಾರ್ಲಿಂಗ್ ಕೃಷ್ಣ
ಮದರಂಗಿ ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಐದು ವರ್ಷದಿಂದ ನಟಿಯೊಬ್ಬರನ್ನು ಲವ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಡಾರ್ಲಿಂಗ್ ಕೃಷ್ಣ ಲವ್ ಮಾಡುತ್ತಿರುವ ಹುಡುಗಿ ಯಾರಂದ್ರೆ, ಸದ್ಯ ಕೃಷ್ಣನ ಜೊತೆ 'ಲವ್ ಮಾಕ್ ಟೈಲ್' ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ಮಿಲನ ನಾಗರಾಜ್.
ಅಷ್ಟಕ್ಕೂ ಡಾರ್ಲಿಂಗ್ ಕೃಷ್ಣ ಲವ್ ಮಾಡುತ್ತಿರುವ ಹುಡುಗಿ ಯಾರಂದ್ರೆ, ಸದ್ಯ ಕೃಷ್ಣನ ಜೊತೆ 'ಲವ್ ಮಾಕ್ ಟೈಲ್' ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ಮಿಲನ ನಾಗರಾಜ್. ಈ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಕೃಷ್ಣ, ನಾವಿಬ್ಬರು ಕಳೆದ ಐದು ವರ್ಷಗಳಿಂದ ಲವ್ ಮಾಡುತ್ತಿದ್ದೇವೆ. ಆದ್ರೆ ಈಗ ಲವ್ ಮಾಕ್ ಟೈಲ್ ಸಿನಿಮಾ ರಿಲೀಸ್ ಟೈಮಲ್ಲಿ ನಮ್ಮ ಲವ್ ಸ್ಟೋರಿ ಹೆಚ್ಚು ಸುದ್ದಿಯಾಗುತ್ತಿದೆ. ಇದು ನಮಗೆ ಇಷ್ಟ ಇಲ್ಲ. ಲವ್ ಮಾಕ್ ಟೈಲ್ ಸಿನಿಮಾ ಹಿಟ್ ಆದ ನಂತರದ ದಿನವೇ ನಮ್ಮ ಮದುವೆ ವಿಷಯವನ್ನು ಹೇಳುವುದಾಗಿ ಕೃಷ್ಣ ತಿಳಿಸಿದ್ರು.
ನಮ್ ದುನಿಯಾ ನಮ್ ಸ್ಟೈಲ್ ಸಿನಿಮಾದಲ್ಲಿ ಕೃಷ್ಣ ಹಾಗೂ ಮಿಲನ ನಾಗರಾಜ್ ಒಟ್ಟಿಗೆ ಅಭಿನಯಿಸಿದ್ರು. ಈ ಸಿನಿಮಾದಿಂದ ಇಬ್ಬರ ನಡುವೆ ಪರಿಚಯ ಪ್ರೇಮವಾಗಿ ಬದಲಾಗಿದೆ. ಮದುವೆ ಬಗ್ಗೆ ಹೇಳಿರುವ ಕೃಷ್ಣ ಎರಡು ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ಆಗುವ ಯೋಚನೆ ಮಾಡಿದ್ದೇವೆ ಅಂದ್ರು. ಇನ್ನು ಇದೇ ಶುಕ್ರವಾರ ಲವ್ ಮಾಕ್ ಟೈಲ್ ಸಿನಿಮಾ ರಿಲೀಸ್ ಆಗುತ್ತಿದೆ.