'ಲವ್ ಮಾಕ್ಟೈಲ್' ಸಿನಿಮಾ ನಂತರ ಸ್ಯಾಂಡಲ್ವುಡ್ನಲ್ಲಿ ಡಾರ್ಲಿಂಗ್ ಕೃಷ್ಣನಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಲಾಕ್ಡೌನ್ ಆರಂಭವಾದಾಗಿನಿಂದ ಲವ್ ಮಾಕ್ಟೈಲ್ ಸೀಕ್ವೆಲ್ ಸ್ಕ್ರಿಪ್ಟ್ನಲ್ಲಿ ಬ್ಯುಸಿ ಇದ್ದ ಕೃಷ್ಣ, ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
'ಸಂಜು ವೆಡ್ಸ್ ಗೀತಾ' ಹಾಗೂ 'ಮೈನಾ' ಅಂತಹ ರೊಮ್ಯಾಂಟಿಕ್ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗಶೇಖರ್ ಜೊತೆ ಕೃಷ್ಣ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಡಾರ್ಲಿಂಗ್ ಕೃಷ್ಣ ಜೊತೆ ನಿರ್ದೇಶಕ ನಾಗಶೇಖರ್ ಮಾತುಕತೆ ನಡೆಸಿದ್ದು, ಇವರಿಬ್ಬರ ಕಾಂಬಿನೇಷನ್ನಲ್ಲಿ ರೊಮ್ಯಾಂಟಿಕ್ ಸಿನಿಮಾ ಬರುವ ಎಲ್ಲಾ ಲಕ್ಷಣಗಳು ಇವೆ ಎನ್ನಲಾಗುತ್ತಿದೆ. ಇನ್ನು ಈ ಚಿತ್ರಕ್ಕೆ 'ಶ್ರೀ ಕೃಷ್ಣ@gmail.Com' ಅಂತಾ ಟೈಟಲ್ ಇಡಲಾಗಿದೆಯಂತೆ. ಈಗಾಗಲೇ ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಕೂಡಾ ಆರಂಭವಾಗಿದೆ ಎನ್ನಲಾಗುತ್ತಿದೆ.