ಕರ್ನಾಟಕ

karnataka

ETV Bharat / sitara

ಗೌರಿ ಹಬ್ಬಕ್ಕೆ ಸೆಟ್ಟೇರಿತು 'ಲವ್ ಮಿ ಔರ್​ ಹೇಟ್ ಮಿ': ತೆರೆ ಮೇಲೆ ಡಾರ್ಲಿಂಗ್ ಕೃಷ್ಣ - ರಚಿತಾ ರಾಮ್ ಮೋಡಿ - Actress Rachita Ram

ಗೌರಿ ಹಬ್ಬದ ಶುಭದಿನದಂದು ನಟ ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್​ ಅಭಿನಯದ 'ಲವ್ ಮಿ ಔರ್​ ಹೇಟ್ ಮಿ' ಸಿನಿಮಾ ಸೆಟ್ಟೇರಿದೆ.

Darling Krishna
'ಲವ್ ಮಿ ಔರ್​ ಹೇಟ್ ಮಿ' ಸಿನಿಮಾ ತಂಡ

By

Published : Sep 10, 2021, 6:35 AM IST

'ಲವ್​ ಮಾಕ್​ಟೈಲ್' ಸಿನಿಮಾ ಯಶಸ್ಸಿನ ಬಳಿಕ ನಟ ಡಾರ್ಲಿಂಗ್ ಕೃಷ್ಣಗೆ ಬೇಡಿಕೆ ಹೆಚ್ಚಾಗಿದೆ. ಶುಗರ್​ ಫ್ಯಾಕ್ಟರಿ, ಲವ್​ ಮಾಕ್​ಟೈಲ್ 2 ಹೀಗೆ ಬ್ಯಾಕ್ ಟು ಬ್ಯಾಕ್‌ ಚಿತ್ರಗಳನ್ನ ಮಾಡುತ್ತಿರುವ ಕೃಷ್ಣ ಅವರ ನೂತನ ಸಿನಿಮಾ ಲವ್ ಮಿ ಔರ್​ ಹೇಟ್ ಮಿ ಗೌರಿ ಹಬ್ಬದಂದು ಸೆಟ್ಟೇರಿದೆ.

ಕೃಷ್ಣನಿಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಬನಶಂಕರಿ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸೆಟ್ಟೇರಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಡಾರ್ಲಿಂಗ್ ಕೃಷ್ಣ ಅವರ ಪತ್ನಿ ಮಿಲನ ನಾಗರಾಜ್ ಕ್ಲಾಪ್ ಮಾಡಿದ್ದಾರೆ. ತೂಗುದೀಪ ಸಂಸ್ಥೆಯ ಕೆಲವು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ದೀಪಕ್ ಗಂಗಾಧರ್, ರಾಮ್ ಲವ್ ಮಿ ಔರ್​ ಹೇಟ್ ಮಿ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ಗೌರಿ ಹಬ್ಬದ ಶುಭದಿನದಂದು ಚಿತ್ರ ಆರಂಭಿಸಿದ್ದೇವೆ. ಸೆ.13ರಿಂದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ.‌ ಇದೊಂದು ಪಕ್ಕಾ ಲವ್ ಸ್ಟೋರಿ. ನಿಮ್ಮೆಲ್ಲರ ಬೆಂಬಲ ನಮಗಿರಲಿ ಎಂದು ನಿರ್ದೇಶಕ ದೀಪಕ್ ಗಂಗಾಧರ್ ಹೇಳಿದರು.

ಇದನ್ನು ಓದಿ: ನಾನು ಎಲ್ಲೂ ಹಾರಿ ಹೋಗಿಲ್ಲ, ಇಲ್ಲೇ ಇದ್ದೀನಿ: ನಿರೂಪಕಿ ಅನುಶ್ರೀ

ಈ ಬಳಿಕ ಡಾರ್ಲಿಂಗ್ ಕೃಷ್ಣ ಮಾತನಾಡಿ, ಈ ಚಿತ್ರದಲ್ಲಿ ನನ್ನದು ಎರಡು ರೀತಿಯ ಪಾತ್ರ. ಕಾಲೇಜು ಹುಡುಗನಾಗಿ ಹಾಗೂ ಕಾಲೇಜು ನಂತರದ ದಿನಗಳದ್ದು. ಲವ್ ಸಬ್ಜೆಕ್ಟ್ ನನಗೆ ಇಷ್ಟ. ಹಾಗಾಗಿ ಹೆಚ್ಚಾಗಿ ಅದನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದೇವೆ. ನಾವಿಬ್ಬರು ಒಂದೇ ದಿನ ಚಿತ್ರರಂಗ ಪ್ರವೇಶಿಸಿದವರು. ಎಂಟು ವರ್ಷಗಳ ಹಿಂದೆ ನನ್ನ ಮದರಂಗಿ, ರಚಿತಾ ಅವರ ಬುಲ್ ಬುಲ್ ಒಂದೇ ದಿನ ತೆರೆ ಕಂಡಿತ್ತು. ಇಷ್ಟು ವರ್ಷಗಳ ನಂತರ ಒಂದೇ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕೂಡಿ ಬಂದಿದೆ ಎಂದರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ಅಣ್ಣಾವ್ರ ಜನಪ್ರಿಯ ಹಾಡೇ ಚಿತ್ರದ ಗೀತೆಯಾಗಿದೆ. ತುಂಬಾ ಸುಮಧುರ ಗೀತೆಗಳು ಈ ಪ್ರೇಮಕಥಾನಕದಲಿರಲ್ಲಿದೆ ಎಂದು ಸಂಗೀತ ನಿರ್ದೇಶಕ ಹಾಗೂ ಸಹ ನಿರ್ಮಾಪಕ ಶ್ರೀಧರ್ ಸಂಭ್ರಮ್ ಹಾಡುಗಳ ಹಾಗೂ ಸಂಗೀತದ ಬಗ್ಗೆ ವಿವರಣೆ ನೀಡಿದರು. ದೀಪಕ್ ಗಂಗಾಧರ್ ಮೂವೀಸ್ ಲಾಂಛನದಲ್ಲಿ ಸುನೀಲ್ ಬಿ.ಎನ್ ಹಾಗೂ ಮದನ್ ಗಂಗಾಧರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ABOUT THE AUTHOR

...view details