ಕರ್ನಾಟಕ

karnataka

ETV Bharat / sitara

'ತಲೈವಾ' ಹುಟ್ಟುಹಬ್ಬಕ್ಕೆ ರಿಲೀಸ್​​ ಆಯ್ತು ದರ್ಬಾರ್​ ಹೊಸ ಪೋಸ್ಟರ್​​​ - ರಜನಿ ಹುಟ್ಟುಹಬ್ಬಕ್ಕೆ ರಿಲೀಸ್​​ ಆಯ್ತು ಹೊಸ ಪೋಸ್ಟರ್​​​

ರಜನಿಕಾಂತ್​​ ಹುಟ್ಟುಹಬ್ಬದ ಪ್ರಯುಕ್ತ ಈ ಪೋಸ್ಟರ್​​ ರಿಲೀಸ್​ ಮಾಡಲಾಗಿದೆ. ಪೋಸ್ಟರ್​​ನಲ್ಲಿ ರಜನಿಕಾಂತ್​​ ಖಡಕ್​​ ಲುಕ್​ ಮತ್ತು ಸಿಟ್ಟಿನಿಂದ ನಡೆದು ಬರುತ್ತಿದ್ದಾರೆ.

darbar news poster release
ರಜನಿಕಾಂತ್​​

By

Published : Dec 12, 2019, 1:09 PM IST

ತಮಿಳು ಸೂಪರ್​ ಸ್ಟಾರ್​​ ರಜನಿ ಕಾಂತ್​​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ದರ್ಬಾರ್​'​. ಈ ಸಿನಿಮಾದ ವಿಶೇಷ ಪೋಸ್ಟರ್​ ಅನ್ನು ಇಂದು ಚಿತ್ರತಂಡ ರಿಲೀಸ್​ ಮಾಡಿದೆ.

ರಜನಿಕಾಂತ್​​ ಹುಟ್ಟುಹಬ್ಬದ ಪ್ರಯುಕ್ತ ಈ ಪೋಸ್ಟರ್​​ ರಿಲೀಸ್​ ಮಾಡಲಾಗಿದೆ. ಪೋಸ್ಟರ್​​ನಲ್ಲಿ ರಜನಿಕಾಂತ್​​ ಖಡಕ್​​ ಲುಕ್​ ಮತ್ತು ಸಿಟ್ಟಿನಿಂದ ನಡೆದು ಬರುತ್ತಿದ್ದಾರೆ.

ದರ್ಬಾರ್​​ ಸಿನಿಮಾದ ಹೊಸ ಪೋಸ್ಟರ್​​

ಇನ್ನು ಈ ಸಿನಿಮಾದಲ್ಲಿ ರಜನಿಕಾಂತ್​​ ಪೊಲೀಸ್​​ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬರೋಬ್ಬರಿ 25 ವರ್ಷಗಳ ನಂತ್ರ ಮತ್ತೆ ಪೊಲೀಸ್ ಬಟ್ಟೆ ಹಾಕಿದ್ದಾರೆ. 'ತಲೈವಾ' ಈ ಹಿಂದೆ ಅಂದ್ರೆ 1992ರಲ್ಲಿ 'ಪಾಂಡಿಯನ್​'​ ಸಿನಿಮಾದಲ್ಲಿ ಪೊಲೀಸ್​ ಪಾತ್ರ ಮಾಡಿದ್ರು. ಮತ್ತು 1982ರಲ್ಲಿ ತೆರೆ ಕಂಡಿದ್ದ 'ಮೂಂಡ್ರು ಮುಗಮ್'​ ಸಿನಿಮಾದಲ್ಲಿಯೂ ಪೊಲೀಸ್​ ಪಾತ್ರ ನಿರ್ವಹಿಸಿದ್ರು.

'ದರ್ಬಾರ್'​ ಚಿತ್ರಕ್ಕೆ ಎ.ಆರ್​​ ಮುರುಘದಾಸ್​​ ನಿರ್ದೇಶನವಿದ್ದು, ಹೊಸ ವರ್ಷದ ಜನವರಿ 15ರಂದು ತೆರೆಗೆ ಬರಲಿದೆ.

ABOUT THE AUTHOR

...view details