ಕನ್ನಡ ಚಿತ್ರರಂಗದಲ್ಲಿ ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸಿದ ಸಿನಿಮಾ ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್. ನಟ ಹಾಗೂ ನಿರೂಪಕ ದಾನೀಶ್ ಸೇಠ್ ಈ ಚಿತ್ರದಲ್ಲಿ ಕಾರ್ಪೊರೇಟರ್ ಆಗಲು ಏನೆಲ್ಲಾ ಗಿಮಿಕ್ ಗಳನ್ನು ಮಾಡಿದರು ಅನ್ನೋದನ್ನು ನೋಡಿದ್ವಿ. ಈಗ ಹೊಸ ಅವತಾರದಲ್ಲಿ ದಾನೀಶ್ ಸೇಠ್ ಮತ್ತೆ ರಂಜಿಸಲು ಬರುತ್ತಿದ್ದಾರೆ.
ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್ ವೆಬ್ ಸೀರೀಸ್ನಲ್ಲಿ ದಾನೀಶ್ ಸೇಠ್ ಒಬ್ಬ ಭ್ರಷ್ಟ ಹಾಗೂ ಸ್ವಯಂ ಸೇವೆಯ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾದ್‌ಖಾನ್ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ.
ನಟ ದಾನೀಶ್ ಸೇಠ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಗಳ ಮೂಲಕ ಅವರು ಆಗಾಗ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ.