'ಹಂಬಲ್ ಪೊಲಿಟಿಷಿಯನ್ ನೊಗ್ರಾಜ್' ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಯವಾದ ನಟ ದಾನಿಷ್ ಸೇಠ್. ಸಿನಿಮಾ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕಾಮಿಡಿ ವಿಡಿಯೋ ಮೂಲಕ ಕೂಡಾ ದಾನಿಷ್ ಸೇಠ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ವಿಡಿಯೋಗಳ ಮೂಲಕ ಕನ್ನಡಿಗರು ಮಾತ್ರವಲ್ಲ ತಮಿಳು, ತೆಲುಗು, ಹಿಂದಿ ಭಾಷಿಕರಿಗೂ ಇವರು ಬಹಳ ಪರಿಚಯ.
ದಾನಿಶ್ ಸೇಠ್ಗೆ ಲವ್ ಆಗಿದ್ಯಂತೆ...ಪ್ರೇಯಸಿ ಜೊತೆಗಿನ ಫೋಟೋ ಹಂಚಿಕೊಂಡ ನಟ - Danish sait shared his love matter
ಫ್ರೆಂಚ್ ಬಿರ್ಯಾನಿ, ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ದಾನಿಶ್ ಸೇಠ್ ತಮ್ಮ ಪ್ರೀತಿ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿರುವುದಕ್ಕೆ ಪ್ರೇಯಸಿ ಅನ್ಯಾಗೆ ಧನ್ಯವಾದ ಅರ್ಪಿಸಿದ್ದಾರೆ.
ತಮ್ಮ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ದಾನಿಶ್ ಸೇಠ್ಗೆ ಈಗ ಲವ್ ಆಗಿದೆಯಂತೆ. ನಿನ್ನೆಯಷ್ಟೇ ತಮ್ಮ ಪ್ರೇಯಸಿ ಜೊತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ದಾನಿಶ್ ಸೇಠ್ ಅಭಿಮಾನಿಗಳಿಗೆ ತಮ್ಮ ಮನದನ್ನೆಯನ್ನು ಪರಿಚಯಿಸಿದ್ದಾರೆ. "ಎಲ್ಲರಿಗೂ ನಮಸ್ಕಾರ, ಈಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ನನ್ನ ಜೀವನದ ಭಾಗವಾಗಿ ಕೊನೆಯವರೆಗೂ ಜೊತೆಯಿರಲು ಒಪ್ಪಿಕೊಂಡಿದ್ದಕ್ಕೆ ಧನ್ಯವಾಗಳು" ಎಂದು ಪ್ರಿಯತಮೆ ಥ್ಯಾಂಕ್ಸ್ ಹೇಳಿದ್ದಾರೆ. ದಾನಿಶ್ ಪ್ರೀತಿಸುತ್ತಿರುವ ಈ ಹುಡುಗಿ ಹೆಸರು ಅನ್ಯಾ ರಂಗಸ್ವಾಮಿ. ಅನ್ಯಾ ಮುಂಬೈನಲ್ಲಿ ನೆಲೆಸಿದ್ದು, ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಅನ್ಯಾ ಯೋಗಪಟು ಎಂದು ತಿಳಿದುಬಂದಿದೆ. ದಾನಿಶ್ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ದಾನಿಶ್ ಹಾಗೂ ಅನ್ಯಾ ಇಬ್ಬರಿಗೂ ನೆಟಿಜನ್ಸ್ ಶುಭ ಕೋರಿದ್ದಾರೆ.