‘ಬಡವ ರಾಸ್ಕಲ್’ ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದಲೇ ಸೌಂಡ್ ಮಾಡುತ್ತಿರುವ ಚಿತ್ರ. ಡಾಲಿ ಧನಂಜಯ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಬಡವ ರಾಸ್ಕಲ್ ಸಿನಿಮಾ, ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ ಆಧರಿಸಿರೋ ಬಡವ ರಾಸ್ಕಲ್ ಸಿನಿಮಾವನ್ನ ಶಂಕರ್ ಗುರು ನಿರ್ದೇಶನ ಮಾಡಿದ್ದಾರೆ. ಚಿತ್ರ ಇದೇ ಸೆಪ್ಟೆಂಬರ್ 24ರಿಂದು ಸಿನಿಮಾ ಮಂದಿರ ತಲುಪಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಧನಂಜಯ ಜೊತೆ ಅಮೃತಾ ಅಯ್ಯಂಗಾರ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಜೊತೆಗೆ ನಟಿ ತಾರಾ, ಸ್ಪರ್ಶ ರೇಖಾ, ರಂಗಾಯಣ ರಘು, ಪೂರ್ಣಚಂದ್ರ, ನಾಗಭೂಷಣ್, ಶಮಂತ್, ನಿರಂಜನ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ.
ವಾಸುಕಿ ವೈಭವ್ ಸಂಗೀತವಿರುವ ಈ ಚಿತ್ರಕ್ಕೆ ಪ್ರೀತಾ ಜಯರಾಮನ್ ಕ್ಯಾಮರಾ ಕೈಚಳಕವಿದೆ. ಸಾವಿತ್ರಮ್ಮ ಅಡವಿಸ್ವಾಮಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ:ಎರಡನೇ ಲಾಕ್ಡೌನ್ ಬಳಿಕ ಚಿತ್ರಮಂದಿರಗಳಲ್ಲಿ 'ಕಾಗೆ ಮೊಟ್ಟೆ'