ಕರ್ನಾಟಕ

karnataka

By

Published : Nov 12, 2019, 7:57 PM IST

ETV Bharat / sitara

'ಒಡೆಯ'ನಿಂದ ಲೋಕಾರ್ಪಣೆಗೊಂಡಳು'ದಮಯಂತಿ' : ರಾಧಿಕಾ ಲುಕ್​​ ನೋಡಿದ್ರೆ ಶಾಕ್​ ಆಗ್ತಿರಾ..!

ರಾಧಿಕಾ ಕುಮಾರಸ್ವಾಮಿ ನಟನೆಯ ದಮಯಂತಿ ಸಿನಿಮಾದ ಟ್ರೇಲರ್​ ರಿಲೀಸ್​​ ಆಗಿದ್ದು, ರಾಧಿಕಾ ಕುಮಾರಸ್ವಾಮಿಯ ಉಗ್ರಾವತಾರ ಬಹಿರಂಗವಾಗಿದೆ. ಟ್ರೇಲರ್​​ಅನ್ನು ಡಿಬಾಸ್​​ ದರ್ಶನ್​ ಲಾಂಚ್​ ಮಾಡಿದ್ದಾರೆ.

ರಾಧಿಕಾ ಮತ್ತು ದರ್ಶನ್​​

ಬಹಳ ದಿನಗಳ ನಂತ್ರ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿರುವ ರಾಧಿಕಾ ಕುಮಾರಸ್ವಾಮಿ ಇದೀಗ ದಮಯಂತಿ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ರಿಗೂ ಗೊತ್ತಿದೆ. ಈ ಚಿತ್ರ ಟೈಟಲ್​​​ ಮತ್ತು ಟೀಸರ್​​ನಿಂದಲೇ ಹೆಚ್ಚು ಸದ್ದು ಮಾಡಿತ್ತು. ಇದೀಗ ಸಿನಿಮಾದ ಟ್ರೇಲರ್​ ರಿಲೀಸ್​​ ಆಗಿದ್ದು, ರಾಧಿಕಾ ಕುಮಾರಸ್ವಾಮಿಯ ಉಗ್ರಾವತಾರ ಬಹಿರಂಗವಾಗಿದೆ.

ಈ ಸಿನಿಮಾದ ಮತ್ತೊಂದು ವಿಶೇಷತೆ ಏನಂದ್ರೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ 5 ಭಾಷೆಯಲ್ಲಿ ಟೀಸರ್​​ ತಯಾರಾಗಿದ್ದು ಒಂದೇ ಬಾರಿ ಪಂಚ ಭಾಷೆಯಲ್ಲಿ ರಿಲೀಸ್ ಆಗಿತ್ತು. ಐದು ಭಾಷೆಗಳಲ್ಲಿ ಬರಲು ರೆಡಿಯಾಗಿರುವ ದಮಯಂತಿಯ ಅವತಾರ ಹೇಗಿದೆ ಎಂಬುದನ್ನು ಸಿನಿಮಾ ನೋಡಿಯೇ ಕಣ್ತುಂಬಿಕೊಳ್ಳಬೇಕು.

ಇಂದು ರಿಲೀಸ್​​ ಆಗಿರುವ ಟ್ರೇಲರ್​ ಅನ್ನು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಲೋಕಾರ್ಪಣೆ ಮಾಡಿದ್ದಾರೆ. ಈ ಸಿನಿಮಾಕ್ಕೆ ನವರಸನ್ ನಿರ್ದೇಶನವಿದ್ದು, ಅವರೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಶ್ರೀ ಲಕ್ಷ್ಮೀ ವೃಶಾದ್ರಿ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ತಯಾರಾಗಿರೋ ಈ ಸಿನಿಮಾಗೆ ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ. ಮಹೇಶ್ ರೆಡ್ಡಿ ಸಂಕಲನವಿರೋ ಈ ಸಿನಿಮಾಗೆ ಪಿಕೆಎಚ್ ದಾಸ್ ಕ್ಯಾಮೆರಾ ಕಣ್ಣಾಗಿದ್ದಾರೆ. ಸದ್ಯ ಟ್ರೇಲರ್​​ ಯೂ ಟ್ಯೂಬ್​​ನಲ್ಲಿ ಬಾರಿ ಸದ್ದು ಮಾಡುತ್ತಿದೆ.

ABOUT THE AUTHOR

...view details