ಅಭಿಮಾನಿಗಳು ಏನೇ ಕೀಟಲೆ ಮಾಡಿದ್ರೂ, ಕಾಲೆಳೆದ್ರೂ ಕೆಲವು ಸೆಲೆಬ್ರಿಟಿಗಳು ಸ್ಪೋರ್ಟಿವ್ ಆಗಿ ತೆಗೆದುಕೊಳ್ತಾರೆ. ಇದಕ್ಕೊಂದು ನಿದರ್ಶನ ನಟ ಡಾಲಿ ಧನಂಜಯ್.
ಹಾಲಿವುಡ್ನಲ್ಲಿ 'ಜೋಕರ್' ಚಿತ್ರದ ಹವಾ ಜೋರಾಗಿದೆ. ಈ ಸಿನಿಮಾದ ಜೋಕರ್ ಪಾತ್ರವನ್ನು ಸ್ಯಾಂಡಲ್ವುಡ್ನ ಡಾಲಿ ಧನಂಜಯ್ಗೆ ಹೋಲಿಸಿ ಪಾತ್ರವನ್ನು ಎಡಿಟ್ ಮಾಡಿದ್ದಾರೆ. ಫೋಟೋವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದು, ಇದಕ್ಕೆ ಧನಂಜಯ್ ಪ್ರೋತ್ಸಾಹಿಸಿ ಕಮೆಂಟ್ ಮಾಡಿದ್ದಾರೆ.
ಫೇಸ್ ಬುಕ್ ಫೋಟೋಗೆ ಕಮೆಂಟ್ ಮಾಡಿರುವ 'ರಾಟೆ' ನಾಯಕ, ಸಕತ್ತಾಗಿ ಎಡಿಟ್ ಮಾಡಿ ಪೋಸ್ಟ್ ಮಾಡ್ತಾ ಇರ್ತೀರಾ. ಇದನ್ನು ನಿಲ್ಲಿಸಬೇಡಿ. ಶೇರ್ ಮಾಡಿ. ನನ್ನನ್ನು ಜೋಕರ್ ಮಾಡಿದ ನಿಮ್ಮ ಕಲ್ಪನೆಗೆ ನನ್ನ ಸಲಾಮ್ ಎಂದು ಬರೆದುಕೊಂಡಿದ್ದಾರೆ.
ಎಡಿಟ್ ಮಾಡಿರೋ ಫೋಟೋಗಳಲ್ಲಿ 'ಪಾಪ್ ಕಾರ್ನ್ ಮಂಕಿ ಟೈಗರ್ ' ಸಿನಿಮಾದ ಗೆಟಪ್ ಇದೆ. ಈ ಫೋಟೋ ತಿದ್ದಿಜೋಕರ್ ಮಾಡಲಾಗಿದೆ. ಈ ಸಿನಿಮಾವನ್ನು ಸೂರಿ ನಿರ್ದೇಶನ ಮಾಡ್ತಿದ್ದು, ಧನಂಜಯ್ಗೆ, ನಿವೇದಿತಾ, ಅಮೃತಾ, ಸಪ್ತಮಿ ನಾಯಕಿಯರಾಗಿ ನಟಿಸಿದ್ದಾರೆ.