ಕರ್ನಾಟಕ

karnataka

ETV Bharat / sitara

ಕೊರೊನಾ ಎಫೆಕ್ಟ್: ಈ ಬಾರಿ ಆನ್​ಲೈನ್​ನಲ್ಲಿ ನಡೆಯಲಿದೆ ಡ್ಯಾಡಿ ನಂ. 1 ಆಡಿಷನ್! - daddy number 1 show audition in online

ಡ್ಯಾಡಿ ನಂ 1 ಶೋ ಸುಮಾರು 13 ವರ್ಷಗಳ ನಂತರ ಪುನರಾಗಮನ ಮಾಡಲು ಸಿದ್ಧವಾಗಿದೆ. ಕೊನೆಯದಾಗಿ ಈ ಶೋ 2008 ರಲ್ಲಿ ಪ್ರಸಾರವಾಗಿತ್ತು. ಈ ಶೋನಲ್ಲಿ ನಾಲ್ಕರಿಂದ 10 ವರ್ಷದೊಳಗಿನ ತಂದೆ ಮತ್ತು ಮಕ್ಕಳ ನಡುವಿನ ಬಾಂಧವ್ಯವನ್ನು ಪ್ರದರ್ಶಿಸಲಾಯಿತು. ಈಗ ಶೋನ ನವೀಕರಿಸಿದ ಆವೃತ್ತಿಯು ಬರುತ್ತಿದ್ದು, ಉತ್ತಮ ಪ್ರದರ್ಶನದ ಗುರಿಯನ್ನು ಹೊಂದಿದೆ.

show
show

By

Published : May 10, 2021, 6:17 PM IST

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ಬೆನ್ನಲ್ಲೇ ಸರ್ಕಾರವು ಲಾಕ್​​ಡೌನ್ ಘೋಷಿಸಿರುವುದರಿಂದ ಇದು ಸಾಮಾನ್ಯರ ಜನಜೀವನ ಸೇರಿದಂತೆ ಕಿರುತೆರೆ ಕ್ಷೇತ್ರವನ್ನೂ ಅಸ್ತವ್ಯಸ್ತಗೊಳಿಸಿದೆ. ಈಗಾಗಲೇ ಅನೇಕ ಧಾರಾವಾಹಿಗಳು ಚಿತ್ರೀಕರಣ ನಿಲ್ಲಿಸಿದರೆ, ಬಿಗ್ ಬಾಸ್​ನಂತಹ ದೊಡ್ಡ ದೊಡ್ಡ ರಿಯಾಲಿಟಿ ಶೋಗಳು ಸ್ಥಗಿತಗೊಂಡಿವೆ. ಆದರೆ ಕೆಲವು ಶೋಗಳು ಲಾಕ್​ಡೌನ್ ಸಮಯದಲ್ಲಿ ಪ್ರಿ ಪ್ರೊಡಕ್ಷನ್ ಕೆಲಸಗಳ ಬಗ್ಗೆ ಚಿಂತಿಸುತ್ತಿವೆ.

ಮೂಲಗಳ ಪ್ರಕಾರ ಮುಂಬರುವ ಗೇಮ್ ಶೋ ಡ್ಯಾಡಿ ನಂ. 1, ರಾಜ್ಯಾದ್ಯಂತ ಆಡಿಷನ್ ನಡೆಸಬೇಕಿತ್ತು. ಆದರೆ ಕೊರೊನಾ ಕರ್ಫ್ಯೂ ಹಿನ್ನೆಲೆ ಅದನ್ನು ಹಿಂತೆಗೆದುಕೊಳ್ಳಬೇಕಾಗಿತ್ತು. ಆದರೆ ತಯಾರಕರು ಈಗ ಆಡಿಷನ್ ಅನ್ನು ಆನ್​​ಲೈನ್​ನಲ್ಲಿ ನಡೆಸಲು ಯೋಜಿಸುತ್ತಿದ್ದಾರೆ. ಅಂದರೆ ಶೋನಲ್ಲಿ ಭಾಗವಹಿಸುವವರನ್ನು ಫೈನಲ್ ಮಾಡಲು ಆನ್​​ಲೈನ್ ನಲ್ಲಿ ಆಡಿಷನ್ ನಡೆಸಲಾಗುವುದು. ನಿರ್ಬಂಧಗಳನ್ನು ಸರಾಗಗೊಳಿಸಿದ ನಂತರ ಮತ್ತೆ ಎಂದಿನಂತೆ ನಡೆಸಲಾಗುವುದು.

ಈ ಗೇಮ್ ಶೋಗೆ ಅಪ್ಪ-ಮಕ್ಕಳ ಜೋಡಿ ಹುಡುಕಲಾಗುತ್ತಿದೆ. ತಮ್ಮ ಬಾಂಧ್ಯವದ ಮೂಲಕ ಅವರು ಜನರನ್ನು ರಂಜಿಸಲಿದ್ದಾರೆ. ಜೊತೆಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ನೀವು ಕೂಡ ಉತ್ತಮ ಅಪ್ಪ-ಮಕ್ಕಳು ಜೋಡಿ ಎಂದು ಭಾವಿಸಿದರೆ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ವಾಹಿನಿಯ ಆಯೋಜಕರು ತಿಳಿಸಿದ್ದಾರೆ.

ಕುತೂಹಲಕಾರಿ ವಿಷಯವೆಂದರೆ ಡ್ಯಾಡಿ ನಂ 1 ಶೋ ಸುಮಾರು 13 ವರ್ಷಗಳ ನಂತರ ಪುನರಾಗಮನ ಮಾಡಲು ಸಿದ್ಧವಾಗಿದೆ. ಕೊನೆಯದಾಗಿ ಈ ಶೋ 2008 ರಲ್ಲಿ ಪ್ರಸಾರವಾಗಿತ್ತು. ಈ ಶೋದಲ್ಲಿ ನಾಲ್ಕರಿಂದ 10 ವರ್ಷದೊಳಗಿನ ತಂದೆ ಮತ್ತು ಮಕ್ಕಳ ನಡುವಿನ ಬಾಂಧವ್ಯವನ್ನು ಪ್ರದರ್ಶಿಸಲಾಯಿತು. ಈಗ ಶೋನ ನವೀಕರಿಸಿದ ಆವೃತ್ತಿಯು ಬರುತ್ತಿದ್ದು, ಉತ್ತಮ ಪ್ರದರ್ಶನದ ಗುರಿಯನ್ನು ಹೊಂದಿದೆ.

ಆಡಿಷನ್ ಮೂಲಕ ಹಲವಾರು ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ಕೆಲವು ಸಂಚಿಕೆಗಳಲ್ಲಿ ಪ್ರಾಥಮಿಕ ಸುತ್ತುಗಳು ನಡೆಯಲಿದೆ. ಪ್ರತಿ ಸಂಚಿಕೆಯಲ್ಲಿ ನಾಲ್ಕರಿಂದ ಐದು ತಂಡಗಳು ಭಾಗವಹಿಸಲಿವೆ. ನಂತರ ಅವರು ಕ್ವಾರ್ಟರ್ ಫೈನಲ್ ರೌಂಡ್’ನಲ್ಲಿ ಸ್ಪರ್ಧಿಸುತ್ತಾರೆ. ಹಲವಾರು ಸುತ್ತುಗಳ ನಂತರ, ಡ್ಯಾಡಿ ನಂ. 1 ಶೋನ ಅತ್ಯುತ್ತಮ ತಂದೆ ಮತ್ತು ಮಕ್ಕಳ ಜೋಡಿಗೆ ಕಿರೀಟ ನೀಡಲಾಗುವುದು. ಆದರೆ ಅವರು ವಿಭಿನ್ನ ಪಂದ್ಯಗಳಲ್ಲಿ ಜಯಿಸಿರಬೇಕು.

ABOUT THE AUTHOR

...view details