ಇಡೀ ದೇಶದ ಸಿನಿ ಪ್ರಿಯರನ್ನು ತನ್ನತ್ತ ಸೆಳೆದಿಟ್ಟುಕೊಂಡಿರುವ ದಬಾಂಗ್-3 ಸಿನಿಮಾ ಡಿಸೆಂಬರ್ 20ಕ್ಕೆ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಕನ್ನಡಿಗರಿಗೆ ಖುಷಿ ನೀಡುವ ವಿಷಯ ಏನಂದ್ರೆ ಕಿಚ್ಚ ಸುದೀಪ್ ಲೀಡ್ ರೋಲ್ ಪ್ಲೇ ಮಾಡಿದ್ದು, ಸಲ್ಮಾನ್ ಖಾನ್ ಎದುರಿಗೆ ನಿಂತು ತೊಡೆ ತಟ್ಟಿರುವುದು.
ಇನ್ನು, ಬೆಂಗಳೂರಿನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ಗೆ ಆಗಮಿಸಿದ್ದ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕಿಚ್ಚನನ್ನು ಹೊಗಳಿ ಉಪ್ಪರಿಗೆ ಮೇಲೆ ಕೂರಿಸಿದ್ದರು. ದಬಾಂಗ್ ಸಿನಿಮಾದಿಂದ ನನಗೆ ಓರ್ವ ಒಳ್ಳೆಯ ಗೆಳೆಯ ಸಿಕ್ಕಿದ. ಸುದೀಪ್ ನನಗಿಂತ ವಯಸ್ಸಿನಲ್ಲಿ ಚಿಕ್ಕವನಿದ್ದರೂ ತುಂಬಾ ಸ್ಟ್ರಾಂಗ್ ಪರ್ಸನಾಲಿಟಿ ಹೊಂದಿದ್ದಾರೆ ಎಂದು ಸಲ್ಲು ಸುದೀಪ್ರನ್ನ ಕೊಂಡಾಡಿದ್ದರು.