ಕರ್ನಾಟಕ

karnataka

ETV Bharat / sitara

‘ಬಡವ ರಾಸ್ಕಲ್​’ ಚಿತ್ರದ ಪ್ರಚಾರ ಮಾಡ್ತಿದ್ದಾರೆ ಅಭಿಮಾನಿಗಳು! - ಡಾಲಿ ಧನಂಜಯ್​ ಅಭಿನಯದ ಬಡವ ರಾಸ್ಕಲ್​ ಚಿತ್ರ,

ಡಾಲಿ ನಟನೆಯ ಬಡವ ರಾಸ್ಕಲ್ ಚಿತ್ರವನ್ನು ಅಭಿಮಾನಿಗಳು ವಿನೂತನವಾಗಿ ಪ್ರಚಾರ ಮಾಡುತ್ತಿದ್ದಾರೆ.

Badava rascal movie Promotion, Badava rascal movie Promotion by Fans, Daali Dhananjay Badava rascal movie, Badava rascal movie release date, ಬಡವ ರಾಸ್ಕಲ್​ ಚಿತ್ರದ ಪ್ರಚಾರ, ಅಭಿಮಾನಿಗಳಿಂದ ಬಡವ ರಾಸ್ಕಲ್​ ಚಿತ್ರದ ಪ್ರಚಾರ, ಡಾಲಿ ಧನಂಜಯ್​ ಅಭಿನಯದ ಬಡವ ರಾಸ್ಕಲ್​ ಚಿತ್ರ, ಬಡವ ರಾಸ್ಕಲ್​  ಮೂವಿ ರಿಲೀಸ್​ ಡೇಟ್​,
ಅಭಿಮಾನಿಗಳಿಂದ ಡಾಲಿ ನಟನೆಯ ಬಡವ ರಾಸ್ಕಲ್ ಚಿತ್ರದ ವಿನೂತನ ಪ್ರಚಾರ

By

Published : Nov 30, 2021, 10:59 AM IST

Updated : Nov 30, 2021, 12:38 PM IST

‘ಬಡವ ರಾಸ್ಕಲ್’ ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ನಿಂದಲೇ ಚರ್ಚೆಯಾಗುತ್ತಿರುವ ಸಿನಿಮಾ. ಡಾಲಿ ಧನಂಜಯ್ ಅಭಿನಯದ ಜೊತೆಗೆ ಚೊಚ್ಚಲ ನಿರ್ಮಾಣ ಮಾಡಿರೋ ಔಟ್ ಅಂಟ್ ಔಟ್ ಮಾಸ್ ಸಿನಿಮಾ.

ಡಿಸೆಂಬರ್ 24 ರಂದು ತೆರೆಯ ಮೇಲೆ ಬರೋದಕ್ಕೆ ಸಜ್ಜಾಗಿರೋ ಬಡವ ರಾಸ್ಕಲ್ ಸಿನಿಮಾದ ಪ್ರಚಾರವನ್ನ ಸಹಜವಾಗಿ ಚಿತ್ರತಂಡ ಮಾಡೋದು ಕಾಮನ್. ಆದ್ರೆ ಡಾಲಿ ಧನಂಜಯ್ ಸಿನಿಮಾವನ್ನ ಅವ್ರ ಅಭಿಮಾನಿಗಳು ಬಹಳ ವಿನೂತನವಾಗಿ ಬಡವ ರಾಸ್ಕಲ್ ಚಿತ್ರದ ಪ್ರಮೋಶನ್ ಮಾಡುತ್ತಿದ್ದಾರೆ.

ಅಭಿಮಾನಿಗಳಿಂದ ಡಾಲಿ ನಟನೆಯ ಬಡವ ರಾಸ್ಕಲ್ ಚಿತ್ರದ ವಿನೂತನ ಪ್ರಚಾರ

ಇತ್ತೀಚಿಗೆ ಬಡವ ರಾಸ್ಕಲ್ ಚಿತ್ರಕ್ಕೆ ಹೊಸ ರೀತಿಯಲ್ಲಿ ಅಭಿಮಾನಿಗಳು ಪ್ರೋತ್ಸಾಹ ನೀಡಿ ಸ್ವಯಂಪ್ರೇರಿತರಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಶಾಲಾ ಮಕ್ಕಳಿಂದ ಹಿಡಿದು ದಿನಸಿ ಅಂಗಡಿ, ತರಕಾರಿ ಅಂಗಡಿ, ಮಾಂಸದ ಅಂಗಡಿ, ಕಾರು ಗ್ಯಾರೇಜ್, ಆಟೋ ಚಾಲಕರವರೆಗೂ ಬಹಳ ವರ್ಗಗಳಲ್ಲಿ ದುಡಿಯುವ ಕನ್ನಡಾಭಿಮಾನಿಗಳು ಚಿತ್ರವನ್ನು ನೋಡಲು ಕಾತರರಾಗಿದ್ದಾರೆ.

ಅಭಿಮಾನಿಗಳಿಂದ ಡಾಲಿ ನಟನೆಯ ಬಡವ ರಾಸ್ಕಲ್ ಚಿತ್ರದ ವಿನೂತನ ಪ್ರಚಾರ

ಓದಿ:ಐಸಿಯುನಲ್ಲಿದ್ದ ಹಸುಗೂಸುವಿನೊಂದಿಗೆ ನರ್ಸ್ ವಿಡಿಯೋ: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಈ ಚಿತ್ರದಲ್ಲಿ ಧನಂಜಯ್ ಒಬ್ಬ ಮಧ್ಯಮ ವರ್ಗದ ಹುಡುಗನ ಪಾತ್ರ ಮಾಡಿದ್ದು, ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಡಾಲಿ ಧನಂಜಯಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್‌ ಅಭಿನಯಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಅಭಿಮಾನಿಗಳಿಂದ ಡಾಲಿ ನಟನೆಯ ಬಡವ ರಾಸ್ಕಲ್ ಚಿತ್ರದ ವಿನೂತನ ಪ್ರಚಾರ

ಡಾಲಿ ಪಿಕ್ಚರ್ (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಾಸುಕಿ ವೈಭವ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ.

ಅಭಿಮಾನಿಗಳಿಂದ ಡಾಲಿ ನಟನೆಯ ಬಡವ ರಾಸ್ಕಲ್ ಚಿತ್ರದ ವಿನೂತನ ಪ್ರಚಾರ

ಈ ಚಿತ್ರವನ್ನು ಕರ್ನಾಟಕದಾದ್ಯಂತ KRG ಸ್ಟೂಡಿಯೋಸ್ ಸಂಸ್ಥೆಯಡಿ ಬಡವ ರಾಸ್ಕಲ್ ಸಿನಿಮಾವನ್ನ ಬಿಡುಗಡೆ ಮಾಡಲಾಗುತ್ತಿದೆ. ಇನ್ನು ದಾಸರ ಕವಿವಾಣಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನುವಂತೆ, ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡು ಬೆಳೆದ ಧನಂಜಯ ಅವರು ಕನ್ನಡ ಚಿತ್ರಗಳನ್ನು ನಿರ್ಮಿಸಿ ಬೆಳೆಸುವ ಎಂದು ಪಣ ತೊಟ್ಟಿದ್ದಾರೆ.

ಅಭಿಮಾನಿಗಳಿಂದ ಡಾಲಿ ನಟನೆಯ ಬಡವ ರಾಸ್ಕಲ್ ಚಿತ್ರದ ವಿನೂತನ ಪ್ರಚಾರ
Last Updated : Nov 30, 2021, 12:38 PM IST

ABOUT THE AUTHOR

...view details