ಕರ್ನಾಟಕ

karnataka

ETV Bharat / sitara

ಡಾಲಿ ಧನಂಜಯ್​ಗೆ ಕರೆ ಮಾಡಿದ ‘ಪುಷ್ಪಾ’.. ಮುತ್ತಿನನಗರಿಗೆ ಹಾರಲಿರುವ ಭೈರವ! - ಡಾಲಿ ಧನಂಜಯ್ ಸುದ್ದಿ

ಲಾಕ್ ಡೌನ್ ಮುಗಿಯೋದನ್ನ ಕಾಯತ್ತಿದ್ದ ಧನಂಜಯ್ ಮತ್ತೆ ಬ್ಯಾಕ್ ಟು ಫಾರ್ಮ್ ಎಂಬಂತೆ ಶೂಟಿಂಗ್ ಅಡ್ಡಗಳಿಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ ಡಾಲಿ ಧನಂಜಯ್ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇರೋದು ನಿಜ. ಆದರೆ 2ನೇ ಲಾಕ್​ಡೌನ್​​ ತೆರವಾದ ನಂತರ ಯಾವ ಸಿನಿಮಾದ ಶೂಟಿಂಗ್ ಸೆಟ್​​ನಲ್ಲೂ ಡಾಲಿ ಕಾಲಿಟ್ಟಿರಲಿಲ್ಲ. ಈಗ ಟಾಲಿವುಡ್​ನ ಪುಷ್ಪಾ ಡಾಲಿಗೆ ಕರೆ ಮಾಡಿ ಶೂಟಿಂಗ್​ಗೆ ಬರುವಂತೆ ಹೇಳಿದ್ದಾಳೆ.

Daali dhananjay acting, Daali dhananjay acting in Allu arujun Pushpa movie, Daali dhananjay, Daali dhananjay news, ಡಾಲಿ ಧನಂಜಯ್ ನಟನೆ, ಅಲ್ಲು ಅರ್ಜುನ್​ ಪುಷ್ಪಾ ಚಿತ್ರದಲ್ಲಿ ಡಾಲಿ ಧನಂಜಯ್ ನಟನೆ, ಡಾಲಿ ಧನಂಜಯ್, ಡಾಲಿ ಧನಂಜಯ್ ಸುದ್ದಿ,
ಮುತ್ತಿನನಗರಿಗೆ ಹಾರಲಿರುವ ಭೈರವ

By

Published : Jul 8, 2021, 7:09 AM IST

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ 'ಪುಷ್ಪಾ' ಚಿತ್ರೀಕರಣ ಸೋಮವಾರದಿಂದ ಹೈದರಾಬಾದ್‌ನಲ್ಲಿ ಮತ್ತೆ ಶುರುವಾಗಿದೆ. ಬನ್ನಿ ಜೊತೆಗೆ, ಫಹಾದ್ ಫಾಜಿಲ್ ಮತ್ತು ನಾಯಕಿ ರಶ್ಮಿ ಜೊತೆ ಡಾಲಿ ಸಹ ಪ್ರಮುಖ ದೃಶ್ಯಗಳ ಚಿತ್ರೀಕರಣ ಮಾಡಲಿದ್ದಾರೆ.

ಈ ವೇಳಾಪಟ್ಟಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಚಿತ್ರತಂಡ ನಿರ್ದೇಶಿಸಿದ್ದು, ಈ ವರ್ಷದ ಅಂತ್ಯದ ವೇಳೆಗೆ 'ಪುಷ್ಪಾ'ವನ್ನು ಚಿತ್ರಮಂದಿರಗಳಿಗೆ ತರುವ ಯೋಜನೆ ಚಿತ್ರತಂಡಕ್ಕಿದೆ.

ಅಲ್ಲು ಅರ್ಜುನ್ ಚಿತ್ರ

ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ 'ಪುಷ್ಪಾ'ದಲ್ಲಿ ಡಾಲಿ ಧನಂಜಯ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಈ ಹಿಂದೆನೇ ಕನ್ಫರ್ಮ್​ ಆಗಿದೆ. ಆಗಸ್ಟ್ ತಿಂಗಳು ಬಂದೇ ಬಿಡ್ತೀವಿ ಎಂದುಕೊಂಡು ಟೀಸರ್ ಲಾಂಚ್ ಮಾಡಿದ್ದ ಫಿಲ್ಮ್ ಟೀಮ್ ಏಕ್​ದಮ್ ಪುಷ್ಪಾ ಚಿತ್ರವನ್ನ ಎರಡೆರಡು ಭಾಗಗಳಲ್ಲಿ ತರುತ್ತಿದ್ದೇವೆ. ಇನ್ನೂ ಶೂಟಿಂಗ್ ಬಾಕಿ ಇದೆ ಎಂದು ಯೂಟರ್ನ್ ಹೊಡೆದಿರುವ ವಿಚಾರ ಗೊತ್ತೇ ಇದೆ. ಈಗ ಎರಡನೇ ಕೊರೊನಾ ಅಲೆ ಹೈದರಾಬಾದ್​​ನಲ್ಲಿ ಕಡಿಮೆಯಾಗಿರೋದ್ರಿಂದ ಶೂಟಿಂಗ್ ಅಡ್ಡಕ್ಕೆ ಪುಷ್ಪಾ ಚಿತ್ರತಂಡ ಇಳಿದಿದೆ.

ಪುಷ್ಪಾ ಚಿತ್ರದ ಪೋಸ್ಟರ್​...

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ನಮ್ಮ ಡಾಲಿ ಧನಂಜಯ್ ಸೇರಿದಂತೆ ಅನೇಕ ಸ್ಟಾರ್ ನಟರು ಪುಷ್ಪಾ ಸಿನಿ ಅಂಗಳದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಡಾಲಿ ಮತ್ತೊಮ್ಮೆ ಪುಷ್ಪಾ ಸಿನಿಮಾದ ಶೂಟಿಂಗ್ ಅಡ್ಡಕ್ಕೆ ಕಾಲಿಡಲಿದ್ದಾರೆ. ಡಾಲಿ ಧನಂಜಯ್ ಅವರಿಗೆ ಶೂಟಿಂಗ್ ಬರಲು ಪುಷ್ಪ ಫಿಲ್ಮ್ ಟೀಮ್​ನಿಂದ ಬುಲಾವ್ ಬಂದಿದ್ದು, ಆದಷ್ಟು ಬೇಗ ಚಿತ್ರತಂಡಕ್ಕೆ ಡಾಲಿ ಲಗ್ಗೆಯಿಡಲಿದ್ದಾರೆ.

ಡಾಲಿ ಧನಂಜಯ್ ಚಿತ್ರ

ABOUT THE AUTHOR

...view details