ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಕ್ಯಾಮರಾದಲ್ಲಿ ಕಾಡು ಪ್ರಾಣಿಗಳ ಚಲನವಲನಗಳನ್ನು ಸೆರೆ ಹಿಡಿದಿರುವುದನ್ನು ಡಿ ಬಾಸ್ ಬಳಗ ಸಾಕ್ಷ್ಯಚಿತ್ರ ಮಾಡಿ ಬಿಡುಗಡೆ ಮಾಡಿದೆ.
ಚಾಲೆಂಜಿಂಗ್ ಸ್ಟಾರ್ ಸಫಾರಿ ಬಗ್ಗೆ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಡಿ ಬಾಸ್ ಬಳಗ - undefined
ನಟ ದರ್ಶನ್ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಸಫಾರಿ ವಿಡಿಯೋವನ್ನು ಅವರ ಡಿ ಬಾಸ್ ಅಭಿಮಾನಿ ಬಳಗ ಸಾಕ್ಷ್ಯಚಿತ್ರವನ್ನಾಗಿ ಬಿಡುಗಡೆ ಮಾಡಿದೆ.
ದರ್ಶನ್ ಕ್ಲಿಕ್ಕಿಸಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸ್ವಚ್ಚಂದವಾಗಿ ತಿರುಗಾಡಿದ್ದ 'ಗಜ'ನ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಗರಹೊಳೆಯ ದಮ್ಮನಕಟ್ಟೆ, ಕಬಿನಿ ಹಿನ್ನೀರು ಪ್ರದೇಶ, ಬಳ್ಳೆ ಶಿಬಿರ, ಇನ್ನಿತರ ಕಡೆಗಳ ಪ್ರಕೃತಿ ಸೌಂದರ್ಯ, ಪ್ರಾಣಿ ಪಕ್ಷಿಗಳ ಚಲನವಲನಗಳನ್ನು ಸೆರೆ ಹಿಡಿದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸುಂದರ ವಿಡಿಯೋವನ್ನು ಸಾಕ್ಷ್ಯಚಿತ್ರವನ್ನಾಗಿ ಮಾಡಲಾಗಿದೆ. ಅಷ್ಟೇ ಅಲ್ಲ, ಸಫಾರಿ ವೇಳೆ ಕಾಡಿನ ಮಕ್ಕಳೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟಿದ್ದ 'ಯಜಮಾನ'ನ ಗಜಪಡೆ ಕ್ಯಾಪ್ಟನ್ ಅರ್ಜುನ ಹುಲಿ, ಕರಡಿ, ಚಿರತೆ, ಸೇರಿದಂತೆ ಕಾಡು ಪ್ರಾಣಿ ಪಕ್ಷಿಗಳ ಲವಲವಿಕೆಯನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸುವ ಪರಿಯನ್ನೂ ಈ ಸಾಕ್ಷ್ಯಚಿತ್ರದಲ್ಲಿ ತೋರಲಾಗಿದೆ.