ವಿರುಷ್ಕಾ ಜೋಡಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗ್ತಾನೆ ಇರ್ತಾರೆ. ಇತ್ತೀಚೆಗ ಅನುಷ್ಕಾ ಶರ್ಮಾ ಗರ್ಭಿಣಿಯಾಗಿರುವ ವಿಚಾರವನ್ನು ತಮ್ಮ ಅಭಿಮಾನಿ ಬಳಗಕ್ಕೆ ಹೇಳಿ ಖುಷಿ ಪಡಿಸಿದ್ರು. ನಾವು ಇನ್ನು ಮುಂದೆ ಇಬ್ಬರಲ್ಲ ಮೂರು ಜನ ಎಂದು ಹೇಳುವ ಮೂಲಕ ಅನುಷ್ಕ ತಾಯಿ ಆಗ್ತಿರೋದನ್ನು ಬಹಿರಂಗಪಡಿಸಿದ್ದರು.
ಸ್ಟೇಡಿಯಂನಲ್ಲಿದ್ದರೂ ಪತ್ನಿ ಬಗ್ಗೆ ಕೊಹ್ಲಿಗೆ ಅದೆಂಥ ಕಾಳಜಿ: ಕ್ಯೂಟ್ ವಿಡಿಯೋ ವೈರಲ್ - kohli news
ಇದೀಗ ಬಾಲಿವುಡ್ ನಟಿ ಅನುಷ್ಕಾ ಮತ್ತು ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಕ್ಯೂಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಈ ವಿಡಿಯೋದಲ್ಲಿ ಕೊಹ್ಲಿ ತನ್ನ ಗರ್ಭಿಣಿ ಪತ್ನಿಗೆ ಕಾಳಜಿ ಮಾಡುತ್ತಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
ಇದೀಗ ಅನುಷ್ಕಾ ಮತ್ತು ವಿರಾಟ್ ಕೊಹ್ಲಿಯ ಕ್ಯೂಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಈ ವಿಡಿಯೋದಲ್ಲಿ ಕೊಹ್ಲಿ ತನ್ನ ಗರ್ಭಿಣಿ ಪತ್ನಿಗೆ ಕಾಳಜಿ ಮಾಡುತ್ತಿರುವುದು ಅಭಿಮಾನಿ ಬಳಗದ ಖುಷಿಗೆ ಕಾರಣವಾಗಿದೆ.
ಹೌದು, ಇತ್ತೀಚೆಗೆ ಅಬುದಾಬಿಯಲ್ಲಿ ಚೆನ್ನೈ V/S ಬೆಂಗಳೂರು ಐಪಿಎಲ್ ಪಂದ್ಯ ನಡೆದಿದ್ದು, ಆ ವೇಳೆ ಮ್ಯಾಚ್ ನೋಡಲು ಅನುಷ್ಕಾ ಕೂಡ ಬಂದಿದ್ರು. ಸ್ಟೇಡಿಯಂನಲ್ಲಿ ಕೂತಿದ್ದ ಅನುಷ್ಕಾಳನ್ನು ನೋಡಿದ ಕೊಹ್ಲಿ, ಊಟ ಮಾಡಿದ್ಯಾ ಎಂದು ಕೇಳಿದ್ದಾರೆ. ಇದಕ್ಕೆ ತಂಬ್ ಎತ್ತುವ ಮೂಲಕ ಆಯ್ತು ಎಂದು ನಗನಗುತ್ತಲೇ ಉತ್ತರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.