ಕರ್ನಾಟಕ

karnataka

ETV Bharat / sitara

ಅರ್ಜುನ್​ ಸರ್ಜಾ ವಿರುದ್ಧ ಚಾರ್ಜ್​ಶೀಟ್​​ ಸಲ್ಲಿಕೆಗೆ ಕಾಲಾವಕಾಶ ಕೋರಿಕೆ - undefined

ನಟ ಅರ್ಜುನ್ ಸರ್ಜಾ ಮೇಲಿನ ಶ್ರುತಿ ಹರಿಹರನ್ ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಈಗಾಗಲೇ ಚಾರ್ಜ್​ಶೀಟ್ ತಯಾರಿಸಿದ್ದಾರೆ. ಆದರೆ ನ್ಯಾಯಾಲಯಕ್ಕೆ ಅದನ್ನು ಸಲ್ಲಿಸಲು ಇನ್ನೂ ಕಾಲಾವಕಾಶ ಕೋರಿ ಅನುಮತಿ ಕೂಡಾ ಪಡೆದಿದ್ದಾರೆ.

ಅರ್ಜುನ್ ಸರ್ಜಾ

By

Published : Feb 11, 2019, 3:46 PM IST

ನಟ ಅರ್ಜುನ್ ಸರ್ಜಾ ವಿರುದ್ದದ ಮೀ ಟೂ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಚಾರ್ಜ್​ಶೀಟ್ ಸಲ್ಲಿಕೆಗೆ ಕಾಲಾವಕಾಶ ನೀಡಲು ಕೇಂದ್ರ ಡಿಸಿಪಿ ಅವರಿಂದ ಕಬ್ಬನ್​ ಪಾರ್ಕ್ ಪೊಲೀಸರು ಅನುಮತಿ ಪಡೆದಿದ್ದಾರೆ.

ತನಿಖೆಗೆ ಕಾಲಾವಕಾಶ ಬೇಕು, ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಹೀಗಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಕಾಲಾವಾಕಾಶ ಬೇಕಿರುವುದಾಗಿ ಕಬ್ಬನ್​​​ಪಾರ್ಕ್ ಪೊಲೀಸರು ಡಿಸಿಪಿಗೆ ಕೋರಿದ್ದಾರೆ ಎನ್ನಲಾಗಿದೆ. ದೂರು ನೀಡಿದ 90 ದಿನಗಳ ಒಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಆದರೆ ಕಬ್ಬನ್ ಪಾರ್ಕ್ ಪೊಲೀಸರು ಈ ಪ್ರಕರಣದಲ್ಲಿ ಇನ್ನೂ ಸಾಕ್ಷಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ‌‌.

ಶ್ರುತಿ ಹರಿಹರನ್​​, ಅರ್ಜುನ್ ಸರ್ಜಾ

ಏನಿದು ಪ್ರಕರಣ
'ವಿಸ್ಮಯ ' ಚಿತ್ರದ ಚಿತ್ರೀಕರಣ ವೇಳೆ ನಟ ಅರ್ಜುನ್ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ನಟಿ ಶೃತಿ ಹರಿಹರನ್ 2018 ಅಕ್ಟೋಬರ್ 25 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ಶ್ರುತಿ‌ ಮತ್ತು ಅರ್ಜುನ್ ಸರ್ಜಾ ಇಬ್ಬರ ಹೇಳಿಕೆಗಳನ್ನೂ ದಾಖಲಿಸಿದ್ರು. ಆದ್ರೆ ಸಿನಿಮಾ‌ ಶೂಟಿಂಗ್ ವೇಳೆಯ ಪ್ರತ್ಯಕ್ಷ ಸಾಕ್ಷಿಗಳನ್ನು ಕಲೆ ಹಾಕಲು ಈಗ ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details