ಕರ್ನಾಟಕ

karnataka

ETV Bharat / sitara

ಕಿರುತೆರೆಯ ಕಲಾವಿದರಿಗೆ ಇಲ್ಲಿದೆ ಒಂದು ಶುಭ ಸುದ್ದಿ...! - ಕಿರುತೆರೆ ಕಲಾವಿದರಿಗೆ  ಕ್ರಿಕೆಟ್ ಲೀಗ್,

ಕಿರುತೆರೆಯ ಕಲಾವಿದರಿಗೆ ಇಲ್ಲಿದೆ ಒಂದು ಶುಭ ಸುದ್ದಿ! ನೀವು ಕಿರುತೆರೆ ಕಲಾವಿದರಾಗಿದ್ದರೆ ಹಿಂದೆ ಮುಂದೆ ನೋಡದೇ ಬಂದಿರುವ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆದರೆ ಅದಕ್ಕೆ ಎರಡೇ ಎರಡು ಕಂಡೀಷನ್​ಗಳಿವೆ. ಮೊದಲನೆಯದು ನಿಮಗೆ ಕ್ರೀಡೆಯತ್ತ ಒಲವಿರಬೇಕು. ಎರಡನೆಯದು ನೀವು ಕ್ರಿಕೆಟ್ ಆಡುವವರಾಗಿರಬೇಕು.

ಕಿರುತೆರೆ ಕಲಾವಿದರಿಗೆ ಕ್ರಿಕೆಟ್ ಲೀಗ್

By

Published : Oct 17, 2019, 6:24 AM IST

ಹೌದು, ಕಿರುತೆರೆಯ ಕಲಾವಿದರಿಗಾಗಿ ಕ್ರಿಕೆಟ್ ಲೀಗ್ ನಡೆಯುತ್ತಿದೆ. ಅದಕ್ಕೆ ಟೆಲಿವಿಷನ್ ಕ್ರಿಕೆಟ್ ಲೀಗ್ ಎಂದು ಕೂಡಾ ನಾಮಕರಣ ಮಾಡಲಾಗಿದೆ. ಈ ಲೀಗ್​ನಲ್ಲಿ ಭಾಗವಹಿಸಲು ಕೇವಲ ಕಿರುತೆರೆ ಕಲಾವಿದರಿಗೆ ಮಾತ್ರ ಅವಕಾಶ. ಕಿರುತೆರೆ ಎಂದ ಮಾತ್ರಕ್ಕೆ ಅದು ಕೇವಲ ಧಾರಾವಾಹಿಗಳಿಗೆ ಮಾತ್ರ ಸೀಮಿತವಲ್ಲ. ಬದಲಿಗೆ ಇಷ್ಟು ವರುಷ ಪ್ರಸಾರವಾಗಿರುವ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿರುವಂತಹ ಕಲಾವಿದರುಗಳಿಗೆ ಕೂಡಾ ಈ ಕ್ರಿಕೆಟ್ ಲೀಗ್​ನಲ್ಲಿ ಭಾಗವಹಿಸುವ ಅವಕಾಶವಿದೆ.

ಕಿರುತೆರೆ ಕಲಾವಿದರಿಗೆ ಕ್ರಿಕೆಟ್ ಲೀಗ್

ನೀವು ಕ್ರಿಕೆಟ್‌ ಪ್ರಿಯರು ಎಂದಾಗಿದ್ದರೆ ಇನ್ನು ತಡ ಮಾಡುವ ಅವಶ್ಯಕತೆಯಿಲ್ಲ. ಈಗಲೇ ಈ ಲಿಂಕ್ ಅನ್ನು ಒಪನ್ ಮಾಡಿ (https://forms.gle/dqxte36SmvuWaKyF7) ಆದಷ್ಟು ಬೇಗ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ. ಇದರ ಜೊತೆಗೆ ನಿಮ್ಮ ಸಹ ಕಲಾವಿದರ ಬಳಿ ಈ ವಿಚಾರವನ್ನು ಶೇರ್ ಮಾಡಲು ಕೂಡಾ ಮರೆಯದಿರಿ.

ABOUT THE AUTHOR

...view details