ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಮಗಳ ಮದುವೆಯ ಸಂಭ್ರಮ ಜೋರಾಗಿದೆ. ಮುದ್ದಿನ ಮಗಳ ಮದುವೆಯನ್ನು ಅದ್ಬುತವಾಗಿ ಮಾಡಲು ಪ್ಲಾನ್ ಮಾಡಿರುವ ರಣಧೀರನ ಮನೆಯಲ್ಲಿ ಮದುವೆಯ ಸಿದ್ದತೆ ಬಹಳ ಜೋರಾಗಿದೆ.
ಕ್ರೇಜಿ ಡ್ಯಾನ್ಸ್! ರವಿಚಂದ್ರನ ಮನೆಯಲ್ಲಿ ಪುತ್ರಿಯ ಮದುವೆ ಸಂಭ್ರಮ.. ಮಡದಿ, ಮಕ್ಕಳೊಂದಿಗೆ ರವಿಮಾಮ ಡ್ಯಾನ್ಸ್.. - undefined
ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಮಗಳ ಮದುವೆಯ ಅರಿಶಿಣ ಶಾಸ್ತ್ರ ಕಾರ್ಯಕ್ರಮದಲ್ಲಿ ಹೆಂಡತಿಯ ಜೊತೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.

ಕ್ರೇಜಿ ಸ್ಟಾರ್ ರವಿಚಂದ್ರನ್
ಹೆಂಡತಿ ಜೊತೆ ಸ್ಟೆಪ್ ಹಾಕಿದ ಕ್ರೇಜಿಸ್ಟಾರ್
ನಿನ್ನೆ ರಾತ್ರಿ ನಡೆದ ಅರಿಶಿನ ಶಾಸ್ತ್ರದ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಡದಿಯ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇಂದು ಮತ್ತು ನಾಳೆ ರವಿಮಾಮನ ಮಗಳ ಮದುವೆ ನಗರದ ಅರಮನೆ ಮೈದಾನದ ತ್ರಿಪುರ ವಾಹಿನಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಮದುವೆಯ ಸಕಲ ಸಿದ್ದತೆಯಾಗಿದ್ದು, ಭಾರತೀಯ ಚಿತ್ರರಂಗದ ಬಹುತೇಕ ಸ್ಟಾರ್ಗಳು ಪ್ರೇಮಲೋಕದ ಜನಕನ ಮಗಳ ಮದುವೆಗೆ ಬರುವ ನಿರೀಕ್ಷೆ ಇದೆ.
Last Updated : May 28, 2019, 11:38 AM IST