ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ ಮದುವೆ ಮೇ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಲಿದೆ. ಮದುವೆಗೆ ಇನ್ನು ವಾರವಷ್ಟೇ ಬಾಕಿ ಇದ್ದು, ರವಿಚಂದ್ರನ್ ಇನ್ನೂ ಲಗ್ನಪತ್ರಿಕೆ ಹಂಚುವ ಕಾರ್ಯದಲ್ಲಿ ಬ್ಯುಸಿ ಇದ್ದಾರೆ.
ಕಾಂಗ್ರೆಸ್ ಮುಖಂಡರನ್ನು ಮಗಳ ಮದುವೆಗೆ ಆಹ್ವಾನಿಸಿದ ಕ್ರೇಜಿಸ್ಟಾರ್ - undefined
ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ಪುತ್ರಿ ಮದುವೆಗೆ ಒಂದು ವಾರವಷ್ಟೇ ಬಾಕಿಯಿದ್ದು, ಇಂದು ರಾಜಕೀಯ ಗಣ್ಯರನ್ನು ಭೇಟಿ ಮಾಡಿದ್ದ ರವಿಚಂದ್ರನ್ ಮಗಳ ಮದುವೆಗೆ ಆಮಂತ್ರಿಸಿದ್ದಾರೆ.
ಚಿತ್ರರಂಗದ ಗಣ್ಯರನ್ನು ಮದುವೆಗೆ ಆಮಂತ್ರಿಸಿದ ಬಳಿಕ ಈಗ ರಾಜಕೀಯ ಮುಖಂಡರಿಗೆ ಲಗ್ನಪತ್ರಿಕೆ ಹಂಚುತ್ತಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಎಂ.ಬಿ ಪಾಟೀಲ್, ಸಿ.ಎಂ. ಇಬ್ರಾಹಿಂ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದರು.
ಪುತ್ರಿ ಮದುವೆಗೆ ಗಣ್ಯಾತಿಗಣ್ಯರು ಅಗಮಿಸಲಿದ್ದು ಸ್ವರ್ಗವನ್ನೇ ಭೂಮಿಗೆ ಇಳಿಸುವ ಪ್ಲಾನ್ನಲ್ಲಿದ್ದಾರೆ ರವಿಮಾಮ. ಇನ್ನು ಮಗಳ ಮದುವೆಗೆ ಬೊಕೆ ತರುವ ಬದಲು ಹಣದ ವೋಚರ್ ನೀಡಿ, ಅದನ್ನು ಅನಾಥಾಶ್ರಮಗಳಿಗೆ ನೀಡುತ್ತೇನೆ. ಇದರಿಂದ ಅವರಿಗೂ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ ರವಿಚಂದ್ರನ್.