ವರನಟ ಡಾ. ರಾಜ್ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್ ಸೇರಿದಂತೆ ಕನ್ನಡದ ಕೆಲವು ನಟ-ನಟಿಯರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಸ್ಯಾಂಡಲ್ವುಡ್ ಕನಸುಗಾರನಿಗೆ ಒಲಿದು ಬಂತು ಗೌರವ ಡಾಕ್ಟರೇಟ್ - ಗೌರವ ಡಾಕ್ಟರೇಟ್ ಪಡೆದ ಕ್ರೇಜಿಸ್ಟಾರ್ ರವಿಚಂದ್ರನ್
30 ವರ್ಷಗಳ ಸಿನಿಮಾ ಸೇವೆಯನ್ನು ಗುರುತಿಸಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬೆಂಗಳೂರಿನ ಸಿಎಂಆರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ನವೆಂಬರ್ 3 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರವಿಚಂದ್ರನ್ ಅವರ ಸುಮಾರು 30 ವರ್ಷಗಳ ಸಿನಿಮಾ ಸೇವೆಯನ್ನು ಗುರುತಿಸಿ ಬೆಂಗಳೂರಿನ ಸಿಎಂಆರ್ ಯೂನಿವರ್ಸಿಟಿ, ಕನಸುಗಾರನಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪುರಸ್ಕಾರ ಮಾಡಿದೆ. ನವೆಂಬರ್ 3 ರಂದು ಸಿಎಂಆರ್ ಯೂನಿವರ್ಸಿಟಿ ಆಡಿಟೋರಿಯಮ್ನಲ್ಲಿ ಪದವಿ ಪುರಸ್ಕಾರ ಸಮಾರಂಭ ನಡೆಯಲಿದೆ. ಡಾಕ್ಟರೇಟ್ ಪದವಿ ಸಿಕ್ಕಿರುವ ಹಿನ್ನೆಲೆ ಕ್ರೇಜಿಸ್ಟಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಅಭಿಮಾನಿಗಳು ಕೂಡಾ ಸಂತೋಷ ವ್ಯಕ್ತಪಡಿಸಿದ್ದು ರವಿಚಂದ್ರನ್ ಅವರಿಗೆ ಶುಭ ಕೋರಿದ್ದಾರೆ. ಸದ್ಯಕ್ಕೆ ರವಿಚಂದ್ರನ್ 'ರವಿ ಬೋಪಣ್ಣ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ರವಿಚಂದ್ರನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.