ಕ್ರೇಜಿಸ್ಟಾರ್ ರವಿಚಂದ್ರನ್ ತಾವು ತಮ್ಮ ಮಕ್ಕಳ ವಿಷಯಗಳಲ್ಲಿ ತಲೆ ಹಾಕುವುದಿಲ್ಲ, ಅವರಿಗೆ ಇಷ್ಟ ಬಂದಿದ್ದು ಮಾಡಲಿ ಎಂದು ಹಿಂದೊಮ್ಮೆ ಹೇಳಿದ್ದರು. ಹಾಗೆಯೇ ಮಕ್ಕಳು ಒಪ್ಪುವ ಚಿತ್ರದಲ್ಲಿ ತಮ್ಮ ಕೈವಾಡ ಇರುವುದಿಲ್ಲ ಎಂದು ಅವರು ಮೊದಲೇ ಸ್ಪಷ್ಟಪಡಿಸಿದ್ದರು. ಈಗ ಇದೇ ಮೊದಲ ಬಾರಿಗೆ, ರವಿಚಂದ್ರನ್ ಅವರು ತಮ್ಮ ಮಗನ ಚಿತ್ರವೊಂದರ ವಿಚಾರವಾಗಿ ತಲೆಹಾಕಿದ್ದು, ಸಲಹೆ-ಸೂಚನೆಗಳನ್ನು ಕೊಟ್ಟಿದ್ದಾರೆ. ಹಾಗಂತ ಖುದ್ದು ರವಿಚಂದ್ರನ್ ಅವರ ಮಗ ಮನುರಂಜನ್ ಹೇಳಿಕೊಂಡಿದ್ದಾರೆ. ಆ ಚಿತ್ರವೇ `"ಮುಗಿಲ್‍ಪೇಟೆ'.
'ಮುಗಿಲ್‍ಪೇಟೆ' ಚಿತ್ರದ ಚಿತ್ರೀಕರಣವು ಕಳೆದ ವರ್ಷವೇ ಪ್ರಾರಂಭವಾಗಿತ್ತು. ಆದರೆ, ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣ ನಿಂತಿದೆ. ಈ ಮಧ್ಯೆ, ರವಿಚಂದ್ರನ್ ಅವರು ಚಿತ್ರದ ಕಥೆ ಕೇಳಿ ಒಂದಿಷ್ಟು ಸಲಹೆಗಳನ್ನ ಕೊಟ್ಟಿದ್ದಾರಂತೆ. ಪ್ರಮುಖವಾಗಿ ಮನುರಂಜನ್ ಅಭಿನಯದ `ಸಾಹೇಬ' ಮತ್ತು `ಬೃಹಸ್ಪತಿ' ಚಿತ್ರಗಳಲ್ಲಿ ಆ್ಯಕ್ಷನ್ ಹಾಗೂ ಸೆಂಟಿಮೆಂಟ್ ಸ್ವಲ್ಪ ಕಡಿಮೆ ಇತ್ತು. ಈ ಚಿತ್ರದಲ್ಲಿ ಅದನ್ನು ಒಂದಿಷ್ಟು ಅಪ್‍ಡೇಟ್ ಮಾಡಿಕೊಳ್ಳುವುದರ ಜೊತೆಗೆ, ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೋ ಎಂದು ಮನುರಂಜನ್‍ಗೆ ರವಿಚಂದ್ರನ್ ಸಲಹೆ ನೀಡಿದ್ದರಂತೆ. ಅದರಂತೆ ಮುಗಿಲ್‍ಪೇಟೆ' ಚಿತ್ರತಂಡದ ಜೊತೆಗೆ ಚರ್ಚೆಸಿರುವ ಮನುರಂಜನ್, ಒಂದಿಷ್ಟು ತಿದ್ದುಪಡಿಗೆ ಸೂಚಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಚಿತ್ರತಂಡದವರು, ಒಂದಿಷ್ಟು ಬದಲಾವಣೆ ಮಾಡಿಕೊಂಡು ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಮುಂದಾಗಿದ್ದಾರೆ.