ಕರ್ನಾಟಕ

karnataka

ETV Bharat / sitara

ರೊಮ್ಯಾಂಟಿಕ್ ಮೂಡ್​​​​​​​​​​ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್! - undefined

ಕ್ರೇಜಿಸ್ಟಾರ್ ರವಿಚಂದ್ರನ್ 'ದೃಶ್ಯ' ಚಿತ್ರದ ನಂತರ ನಟಿಸಿರುವ 'ದಶರಥ' ಸಿನಿಮಾ ಈ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ರವಿಚಂದ್ರನ್​​ಗೆ ಸೋನಿಯಾ ಅಗರ್​​ವಾಲ್ ಹಾಗೂ ಅಭಿರಾಮಿ ಇಬ್ಬರು ನಾಯಕಿಯರಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್

By

Published : Jul 22, 2019, 9:31 PM IST

ಮಗಳ ಮದುವೆ ಕಾರ್ಯಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಇದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಈಗ ರೊಮ್ಯಾಂಟಿಕ್ ಮೂಡ್​​ನಲ್ಲಿದ್ದಾರೆ. ಖ್ಯಾತ ಸಂಭಾಷಣೆಕಾರ ಎಂ.ಎಸ್​​​. ರಮೇಶ್​​​ ನಿರ್ದೇಶಿಸಿರುವ ದಶರಥ ಸಿನಿಮಾದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ.

ರವಿಚಂದ್ರನ್

ಸಂಭಾಷಣೆಕಾರ ಎಂ.ಎಸ್​. ರಮೇಶ್​​​​​ ಐದು ವರ್ಷಗಳ ಬಳಿಕ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇನ್ನು ರವಿಚಂದ್ರನ್ ಕೂಡಾ ಹಲವು ವರ್ಷಗಳ ಬಳಿಕ ಈ ಸಿನಿಮಾದಲ್ಲಿ ಕಪ್ಪು ಕೋಟು ಧರಿಸಿ ವಾದ ಮಾಡಲು ಬರುತ್ತಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್​​​​ಗೆ ಇಬ್ಬರು ನಾಯಕಿಯರು. ಒಬ್ಬರು ಸೋನಿಯಾ ಅಗರ್​​ವಾಲ್​ ಮತ್ತೊಬ್ಬರು ಅಭಿರಾಮಿ. ಈ ಇಬ್ಬರೊಂದಿಗೆ ಕೂಡಾ ರವಿಮಾಮ ರೊಮ್ಯಾನ್ಸ್ ಮಾಡಿದ್ದಾರೆ. ಸದ್ಯಕ್ಕೆ ರವಿಚಂದ್ರನ್ ಹಾಗೂ ಅಭಿರಾಮಿ ನಡುವಿನ ರೊಮ್ಯಾಂಟಿಕ್ ಹಾಡಿನ ಮೇಕಿಂಗ್ ಫೋಟೋಗಳನ್ನು ಚಿತ್ರತಂಡ ರಿವೀಲ್ ಮಾಡಿದೆ.

ರವಿಚಂದ್ರನ್, ಅಭಿರಾಮಿ

ಇದು ರಾಮಾಯಣದ ಆಧುನಿಕ ಕಥೆ ಹೊಂದಿರುವ ದಶರಥ ಸಿನಿಮಾ. ಈ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಗುರುಕಿರಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಜಿ.ಎಸ್.ವಿ. ಸೀತಾರಾಂ ಅವರ ಕ್ಯಾಮರಾ ಕೈ ಚಳಕ ಈ ಚಿತ್ರಕ್ಕಿದೆ. ಮದನ್​​​​-ಹರಿಣಿ, ಕಲೈ, ಭೂಷ ಹೀಗೆ ಮೂರು ಜನ ನೃತ್ಯ ನಿರ್ದೇಶಕರು ನೃತ್ಯ ಸಂಯೋಜನೆ ಮಾಡಿದ್ದಾರೆ. 'ದೃಶ್ಯಂ' ಚಿತ್ರದ ಬಳಿಕ ರವಿಚಂದ್ರನ್ ನಟಿಸಿರುವ ದಶರಥ ಸಿನಿಮಾ ಕ್ರೇಜಿ ಸ್ಟಾರ್ ಅಭಿಮಾನಿಗಳಿಗೆ ಎಷ್ಟರ ಮಟ್ಟಿಗೆ ಇಷ್ಟ ಆಗುತ್ತೆ ಕಾದು ನೋಡಬೇಕು.

ಅಭಿರಾಮಿ

For All Latest Updates

TAGGED:

ABOUT THE AUTHOR

...view details