ಶೋ ಮ್ಯಾನ್, ಕ್ರೇಜಿಸ್ಟಾರ್, ರಣಧೀರ, ಕನಸುಗಾರ, ರವಿಮಾಮ, ಹೀಗೆ ಹಲವು ಬಿರುದುಗಳನ್ನು ಹೊಂದಿರುವ ನಟ ವಿ. ರವಿಚಂದ್ರನ್. ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಟರಲ್ಲಿ ಇವರು ಕೂಡಾ ಒಬ್ಬರು. ಈ ಕ್ರೇಜಿಸ್ಟಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
59 ನೇ ವಸಂತಕ್ಕೆ ಕಾಲಿಟ್ಟ ರವಿಮಾಮ ಇಂದು 58ನೇ ವಸಂತಕ್ಕೆ ಕಾಲಿಟ್ಟಿರುವ ರವಿಚಂದ್ರನ್, ಈ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿಲ್ಲ. ದಿನದ 24 ಗಂಟೆಯೂ ಸಿನಿಮಾ ಬಗ್ಗೆ ಯೋಚಿಸುವ ರವಿಚಂದ್ರನ್, ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ನಿರ್ಮಾಪಕ ವೀರಸ್ವಾಮಿ ಅವರ ಮಗ. ಇವರ ಬಗ್ಗೆ ಅಭಿಮಾನಿಗಳಿಗೆ ಇಂದಿಗೂ ತಿಳಿಯದ ಸಾಕಷ್ಟು ವಿಚಾರಗಳಿವೆ.
59 ನೇ ವಸಂತಕ್ಕೆ ಕಾಲಿಟ್ಟ ರವಿಮಾಮ 1971ರಲ್ಲಿ 'ಕುಲಗೌರವ' ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಪ್ರೇಮಲೋಕ, ರಣಧೀರ, ಅಂಜದಗಂಡು, ರಾಮಾಚಾರಿ, ಅಣ್ಣಯ್ಯ ಹೀಗೆ ಹಲವಾರು ಸೂಪರ್ಹಿಟ್ ಚಿತ್ರಗಳನ್ನು ಮಾಡಿರುವ ರವಿಚಂದ್ರನ್ಗೆ ಈಶ್ವರ್ ಎಂಬ ಮತ್ತೊಂದು ಹೆಸರು ಇದೆ. ರವಿಚಂದ್ರನ್ ತಂದೆ ತಾಯಿ ಈ ಹೆಸರನ್ನುಅವರಿಗೆ ಜಾತಕದ ಪ್ರಕಾರ ಇಟ್ಟು ಅದೇ ಹೆಸರಿನಲ್ಲಿ ಕರೆಯುತ್ತಿದ್ದರು. ಸಿನಿಮಾ ಸೆಲಬ್ರಿಟಿಗಳು ಎಂದರೆ ಪೂಜೆ ಪುನಸ್ಕಾರ ಕಡಿಮೆ ಎಂಬುದು ಪ್ರೇಕ್ಷಕರ ಅನಿಸಿಕೆ. ಆದರೆ ಕ್ರೇಜಿಸ್ಟಾರ್ಗೆ ಈಶ್ವರ ಬಹಳ ಅಚ್ಚುಮೆಚ್ಚಿನ ದೇವರಂತೆ. ಈ ಮಾತಿಗೆ ಸಂಬಂಧಿಸಿದಂತೆ ಒಂದು ವಿಚಾರವನ್ನು ಹೇಳಲೇಬೇಕು.
59ನೇ ವಸಂತಕ್ಕೆ ಕಾಲಿಟ್ಟ ರವಿಮಾಮ ರವಿಚಂದ್ರನ್ ನಿರ್ದೇಶಿಸಿದ 'ಏಕಾಂಗಿ' ಸಿನಿಮಾ ಸೋಲು ಕಂಡು ಇದರಿಂದ ಅವರು ನಷ್ಟ ಅನುಭವಿಸುತ್ತಾರೆ. ಆ ಸಮಯದಲ್ಲಿ ಬೇರೊಂದು ಸಿನಿಮಾ ಚಿತ್ರೀಕರಣಕ್ಕೆಂದು ಹೊರಗೆ ಹೋದಾಗ, ಈಶ್ವರನ ಪ್ರತಿಮೆಯೊಂದನ್ನು ಮನೆಗೆ ಕೊಂಡು ಬಂದಿದ್ದಾರೆ. ನಂತರ ಅವರು ಮಾಡಿದ 'ಮಲ್ಲ' ಚಿತ್ರ ಸೂಪರ್ ಹಿಟ್ ಆಯ್ತು. ಅಂದಿನಿಂದ ಕ್ರೇಜಿಸ್ಟಾರ್ ಈಶ್ವರನ ದೊಡ್ಡ ಭಕ್ತನಾಗಿದ್ದಾರೆ.
59ನೇ ವಸಂತಕ್ಕೆ ಕಾಲಿಟ್ಟ ರವಿಮಾಮ ಇನ್ನು ರವಿಚಂದ್ರನ್ ಸೋಲು ಗೆಲುವುಗಳನ್ನು ಸಾಕಷ್ಟು ನೋಡಿದ್ದಾರೆ. ಆದರೆ ರವಿಚಂದ್ರನ್ ಹೊರಗೆ ಹೋಗುವಾಗ ತಮ್ಮ ತಾಯಿ ಪಟ್ಟಮಾಳ್ ಅವರ ಕೈಯಿಂದ ನೀರು ಕುಡಿದು ಹೋದರೆ ಅವರು ಹೋದ ಕೆಲಸ ಸಕ್ಸಸ್ ಆಗುತ್ತಿತ್ತಂತೆ. ಅಲ್ಲದೆ ರವಿಚಂದ್ರನ್ ಕನ್ನಡ ಚಿತ್ರರಂಗದ ಸಾಕಷ್ಟು ನಟರಿಗೆ ಲಕ್ಕಿ ಹ್ಯಾಂಡ್ ಎನ್ನಬಹುದು. ಹೊಸಬರು ಅಥವಾ ಸ್ಟಾರ್ ನಟರ ಸಿನಿಮಾಗಳ ಮುಹೂರ್ತದಲ್ಲಿ ರವಿಚಂದ್ರನ್ ಕ್ಲ್ಯಾಪ್ ಮಾಡಿದರೆ ಆ ಸಿನಿಮಾಗಳು ಸೂಪರ್ ಹಿಟ್ ಆಗುತ್ತದೆ ಎಂಬುದು ಸಿನಿಮಾ ಮಂದಿ ನಂಬಿಕೆ.
59 ನೇ ವಸಂತಕ್ಕೆ ಕಾಲಿಟ್ಟ ರವಿಮಾಮ ಅಂದಿನ ಕಾಲದಲ್ಲಿ ಪರಭಾಷೆಗಳಲ್ಲಿ ಹೆಸರು ಮಾಡಿದ್ದ ಸುಂದರ ನಟಿಯರನ್ನು ಕನ್ನಡಕ್ಕೆ ಕರೆತಂದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಜೂಹಿ ಚಾವ್ಲಾ, ಖುಷ್ಬೂ, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಹೀಗೆ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆತಂದ ಹೆಗ್ಗಳಿಕೆ ರವಿಚಂದ್ರನ್ ಅವರಿಗೆ ಸಲ್ಲುತ್ತದೆ.
59ನೇ ವಸಂತಕ್ಕೆ ಕಾಲಿಟ್ಟ ರವಿಮಾಮ ಇನ್ನು 'ಪ್ರೇಮಲೋಕ' ಸಿನಿಮಾ ಬಿಡುಗಡೆಯಾಗಿ 32 ವರ್ಷಗಳು ಕಳೆಯುತ್ತಾ ಬಂತು. ಇದಾದ ನಂತರ ಅವರು ಸಾಕಷ್ಟು ಸಿನಿಮಾಗಳನ್ನು ಮಾಡಿದರೂ ಇಂದಿಗೂ ಅವರನ್ನು ಪ್ರೇಮಲೋಕದ ಹೀರೋ ಅಂತಾನೇ ಗುರುತಿಸಲಾಗುತ್ತದೆ. ಆ ಕಾಲದಲ್ಲೇ ರವಿಚಂದ್ರನ್ ಈ ಚಿತ್ರಕ್ಕೆ 60 ಲಕ್ಷ ರೂಪಾಯಿ ಖರ್ಚು ಮಾಡಿ ಯಶಸ್ವಿಯಾಗುತ್ತಾರೆ. ಈ ಸಿನಿಮಾ ಕೋಟಿ ಹಣ ಬಾಚಿತ್ತು.
58 ನೇ ವಸಂತಕ್ಕೆ ಕಾಲಿಟ್ಟ ರವಿಮಾಮ ಕಡಿಮೆ ಸಮಯದಲ್ಲಿ ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ತಮ್ಮ ಪ್ರತಿಭೆ ತೋರಿಸಿದ ಕ್ರೇಜಿ ಸ್ಟಾರ್ 1999ರಲ್ಲಿ ಬಂದ 'ನಾನು ನನ್ನ ಹೆಂಡ್ತೀರು' ಸಿನಿಮಾ ಮೂಲಕ ಸಂಗೀತ ನಿರ್ದೇಶಕನಾಗಿ ಕೂಡಾ ಕೆಲಸ ಮಾಡಿದರು. ನಂತರ ಬಂದ ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ಹಠವಾದಿ, ಅಪೂರ್ವ ಸೇರಿದಂತೆ 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರ ಸಂಗೀತ ಸುಧೆ ಇದೆ.
59 ನೇ ವಸಂತಕ್ಕೆ ಕಾಲಿಟ್ಟ ರವಿಮಾಮ ರವಿಚಂದ್ರನ್ ಬಹುಮುಖ ಪ್ರತಿಭೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿನಿಮಾ ಮಾತ್ರವಲ್ಲ ಇವರಲ್ಲಿ ಮತ್ತೊಂದು ಟ್ಯಾಲೆಂಟ್ ಇದೆ. ಜಾದೂಗಾರನಂತೆ ಹೆಣ್ಣುಮಕ್ಕಳ ಮನಸ್ಸು ಕದ್ದಿರುವ ಈ ಕ್ರೇಜಿಸ್ಟಾರ್ ನಿಜಜೀವನದಲ್ಲಿ ಕೂಡಾ ಜಾದೂ ಮಾಡ್ತಾರೆ. ರವಿಚಂದ್ರನ್ಗೆ ಮ್ಯಾಜಿಕ್ ಬರುತ್ತೆ ಅಂತ ಅದೆಷ್ಟೋ ಜನರಿಗೆ ಗೊತ್ತಿಲ್ಲ.
59 ನೇ ವಸಂತಕ್ಕೆ ಕಾಲಿಟ್ಟ ರವಿಮಾಮ 1991ರಲ್ಲಿ ರವಿಚಂದ್ರನ್ 10 ಕೋಟಿ ರೂಪಾಯಿ ಖರ್ಚು ಮಾಡಿ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಶಾಂತಿ ಕ್ರಾಂತಿ ಸಿನಿಮಾ ಮಾಡ್ತಾರೆ. ಅಂದಿನ ಕಾಲದಲ್ಲಿ ಬಾಲಿವುಡ್ ಚಿತ್ರ ಮಾಡಲೂ ಕೂಡಾ ಇಷ್ಟು ಹಣ ಖರ್ಚು ಮಾಡುತ್ತಿರಲಿಲ್ಲ. ಆ ಸಮಯದಲ್ಲಿ ಬರೋಬ್ಬರಿ 600ಕ್ಕೂ ಹೆಚ್ಚು ಮಕ್ಕಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಬಹುಶಃ ಬೇರೆ ಯಾವ ನಟರೂ ಈ ರೀತಿಯ ಪ್ರಯತ್ನ ಮಾಡಿಲ್ಲ. 30 ಮಕ್ಕಳನ್ನೇ ನಾವು ಶಾಲೆಯಲ್ಲಿ ನಿಭಾಯಿಸಲು ಆಗುವುದಿಲ್ಲ. ಆದರೆ ನೀವು ಅಷ್ಟು ಮಕ್ಕಳನ್ನು ಹೇಗೆ ನಿಭಾಯಿಸಿದಿರಿ ಅಂತ ಶಾಲಾ ಶಿಕ್ಷಕರು ರವಿಚಂದ್ರನ್ ಅವರನ್ನು ಪ್ರಶ್ನಿಸಿ ಈ ವಿಚಾರವಾಗಿ ಆಶ್ಚರ್ಯ ವ್ಯಕ್ತಪಡಿಸಿದ್ದರು.
59 ನೇ ವಸಂತಕ್ಕೆ ಕಾಲಿಟ್ಟ ರವಿಮಾಮ ಭಾರತೀಯ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಟ ಹಾಗೂ ಒಬ್ಬ ಸ್ಟಾರ್ ಸಂಗೀತ ನಿರ್ದೇಶಕ ಒಟ್ಟಿಗೆ ಕೆಲಸ ಮಾಡಿ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಎಂದರೆ ಅದು ರವಿಚಂದ್ರನ್ ಹಾಗೂ ಹಂಸಲೇಖ.
59 ನೇ ವಸಂತಕ್ಕೆ ಕಾಲಿಟ್ಟ ರವಿಮಾಮ ಎಲ್ಲಕ್ಕಿಂತ ಮುಖ್ಯವಾದ ವಿಚಾರ ಎಂದರೆ ರವಿಚಂದ್ರನ್ ತಾವು ಸಿನಿಮಾದಿಂದ ದುಡಿದ ಹಣವನ್ನು ಯಾವುದೇ ಜಮೀನು, ಕಮರ್ಷಿಯಲ್ ಕಾಂಪ್ಲೆಕ್ಸ್, ಸೈಟ್ ಖರೀದಿಸಲು ಬಳಸಲಿಲ್ಲ. ಅದರ ಬದಲಿಗೆ ಸಿನಿಮಾದಿಂದ ದುಡಿದ ಹಣವನ್ನು ಸಿನಿಮಾಗೆ ಬಳಸಿದರು. ಆದ್ದರಿಂದ ಇತ್ತಿಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ರವಿಚಂದ್ರನ್ 'ಇನ್ಮುಂದೆ ನಾನೂ ಎಲ್ಲರಂತೆ ಆಸ್ತಿ ಮಾಡಬೇಕು' ಎಂದು ಹೇಳಿದ್ದರು.
ಒಟ್ಟಿನಲ್ಲಿ ರವಿಚಂದ್ರನ್ ಅಭಿಮಾನಿಗಳಿಗೆ ಏಕೆ ಇಷ್ಟವಾಗ್ತಾರೆ ಎನ್ನುವುದಕ್ಕೆ ಈ ವಿಷಯಗಳೇ ಸಾಕು.