ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನೀಲ್ ಶೆಟ್ಟಿ, ದಿಯಾ ಮಿರ್ಜಾ, ಅತುಲ್ ಕುಲಕರ್ಣಿ ಮತ್ತು ರಾಣಾ ದಗ್ಗುಬಟಿಯಾ ಇದೀಗ ಕೊರೊನಾ ಜಾಗೃತಿ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ರ್ಯಾಪರ್ ಹಾಡಾಗಿದ್ದು, ಹಿಂದಿ, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಮೂಡಿ ಬಂದಿದೆ. ಇದನ್ನು ಜೋಯಲ್ ಡಿಸೋಜಾ ನಿರ್ದೇಶಿಸಿದ್ದಾರೆ. ಅಲ್ಲದೆ ಎಂಸಿ ಅಲ್ತಾಫ್, ಡೋಪೆಡೆಲಿಕ್ಸ್‌ನ ಟೋನಿ ಸೈಕೊ ಮತ್ತು ಸೆವೆನ್ ಬಾಂಟೈಜ್‌ನ ಬೊಂಜ್ ಎನ್. ರಿಬ್ಜ್ ಬರೆದಿದ್ದಾರೆ.
ಈ ಹಾಡು ತುಂಬಾ ಸುಂದರವಾಗಿ ಮೂಡಿ ಬಂದಿದ್ದು ಒಂದೊಳ್ಳೆ ಸಂದೇಶವನ್ನು ಸಾರುತ್ತಿದೆ. ಈ ಹಾಡು ನಿಜವಾಗಿಯೂ ನನ್ನ ಹೃದಯ ತಟ್ಟಿದೆ. ಈ ಹಾಡಿನ ಭಾವನೆ ಅನೇಕರೊಂದಿಗೆ ಸಂವಹಿಸುತ್ತದೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.