ಮುಂಬೈ: ಕೊರೊನಾ ವೈರಸ್ಗೆ ತುತ್ತಾದ ಜನಪ್ರಿಯ ವ್ಯಕ್ತಿಗಳ ಪಟ್ಟಿಗೆ ಅಮೆರಿಕಾದ ಜಾನಪದ ಗಾಯಕಿ ಕಾಲಿ ಶೋರ್ (25) ಅವರು ಸೇರಿಕೊಂಡಿದ್ದಾರೆ. ಶೋರ್ಗೆ ಕೋವಿಡ್-19 ತಗುಲಿರುವುದು ಸೋಮವಾರ ದೃಢಪಟ್ಟಿದೆ. ಸೋಂಕು ಪತ್ತೆಯಾದ ಈ ಕುರಿತು ಸ್ವತಃ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ನಾನು ಮೂರು ವಾರಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇದ್ದೆ. ದಿನಸಿ ಖರೀದಿಗೆ ಮಾತ್ರ ಹೊರ ಹೋಗುತ್ತಿದ್ದೆ. ನಾನು ಚೆನ್ನಾಗಿದ್ದೆ. ಆದರೀಗ ಸೋಂಕು ತಗುಲಿದೆ ಎಂದು ವರದಿ ಬಂದಿದೆ. ಆದರೆ, ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.