ಬೆಂಗಳೂರು:ಯುವರತ್ನ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಇಂಡಸ್ಟ್ರಿಯಲ್ಲಿ ಅಭೂತಪೂರ್ವ ಪ್ರದರ್ಶನ ಕಾಣುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಆ್ಯಕ್ಟಿಂಗ್, ಡ್ಯಾನ್ಸಿಂಗ್, ಫೈಟಿಂಗ್ ಹಾಗೂ ಸೆಂಟಿಮೆಂಟ್ ದೃಶ್ಯಗಳಲ್ಲಿನ ಅಮೋಘ ಅಭಿನಯಕ್ಕೆ ಕೋಟ್ಯಂತರ ಜನ ಫಿದಾ ಆಗಿದ್ದಾರೆ.
ಕಾಸ್ಟ್ಯೂಮ್ ಡಿಸೈನರ್ ಯೋಗಿ ಜಿ ರಾಜ್ ಅಷ್ಟೇ ಅಲ್ಲದೇ 46 ವರ್ಷದ ಪುನೀತ್ ರಾಜ್‍ಕುಮಾರ್, ಈ ಚಿತ್ರದಲ್ಲಿ 26ರ ಚಿರ ಯುವಕನಂತೆ ಕಾಣಿಸ್ತಾರೆ. ಈ ಯುವರತ್ನ ಇಷ್ಟು ಯಂಗ್ ಆಗಿ ಕಾಣೋದಿಕ್ಕೆ ಮುಖ್ಯ ಕಾರಣ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಹಾಕಿರುವ 30ಕ್ಕೂ ವೈರಟಿ ಬಗೆಯ ಸ್ಟೈಲಿಷ್ ಕಾಸ್ಟ್ಯೂಮ್ಗಳು. ಈ ರಾಜಕುಮಾರ ಸಿಲ್ವರ್ ಸ್ಕ್ರೀನ್ ಮೇಲೆ ಸಖತ್ ಸ್ಟೈಲಿಷ್ ಆಗಿ ಕಾಣೋ ತರ ಕಾಸ್ಟ್ಯೂಮ್ ಡಿಸೈನ್ ಮಾಡಿರೋದು ಪ್ರಖ್ಯಾತ ಕಾಸ್ಟ್ಯೂಮ್ ಡಿಸೈನರ್ ಹಾಗೂ ನಿರ್ದೇಶಕ ಯೋಗಿ ಜಿ ರಾಜ್.
ಯುವರತ್ನದಲ್ಲಿ ಅಪ್ಪು ಸ್ಟೈಲಿಷ್ ಲುಕ್ ಈ ಬಗ್ಗೆ ಮಾತನಾಡಿರೋ ಡಿಸೈನರ್ ಯೋಗಿ, ಫಸ್ಟ್ ಟೈಮ್ ಅಪ್ಪು ಸರ್ ಒಂದು ಸಿನಿಮಾದಲ್ಲಿ 30ಕ್ಕೂ ಹೆಚ್ಚು ವೈರಟಿ ಕಾಸ್ಟ್ಯೂಮ್ಗಳನ್ನು ಹಾಕಿರೋದು ಯುವರತ್ನ ಸಿನಿಮಾದಲ್ಲಿ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ ಹಾಗೇ ಕಾಸ್ಟ್ಯೂಮ್ಗಳನ್ನು ಯೋಗಿ ಡಿಸೈನ್ ಮಾಡಿದ್ದಾರಂತೆ.
ಯುವರತ್ನದಲ್ಲಿ ಅಪ್ಪು ಸ್ಟೈಲಿಷ್ ಲುಕ್ ಇದನ್ನೂ ಓದಿ:ರಸ್ತೆಯಲ್ಲಿ ಹೋಗ್ತಿದ್ದ ಪುಟ್ಟ ಬಾಲಕಿ ಮೇಲೆರಗಿದ ಬೀದಿ ನಾಯಿ!
ಯುವರತ್ನ ಸಿನಿಮಾದಲ್ಲಿ ಪವರ್ ಸ್ಟಾರ್ ಹಾಕಿರುವ ಒಂದೊಂದು ಕಾಸ್ಟೂಮ್ ಬೆಲೆ ಲಕ್ಷ ರೂಪಾಯಿ ಮೀರಿವೆ ಎಂಬ ಮಾಹಿತಿ ಇದೆ. ಆದರೆ ಡಿಸೈನರ್ ಯೋಗಿ ಮಾತ್ರ ಪವರ್ ಸ್ಟಾರ್ ಹಾಕಿರುವ ಕಾಸ್ಟ್ಯೂಮ್ಗಳ ಬೆಲೆ ಹೇಳಲಿಲ್ಲ. ಇನ್ನು ಪುನೀತ್ ರಾಜ್‍ಕುಮಾರ್ ಯಾವುದೇ ಕಾಸ್ಟೂಮ್ ಹಾಕಿದರು ಯಂಗ್ ಆಗಿ, ಕಾಣೋದಿಕ್ಕೆ ಅವ್ರ ಫಿಟ್ನೆಸ್ ಕೂಡ ಒಂದು ಅಂತಾರೆ ಡಿಸೈನರ್ ಯೋಗಿ. ಯುವರತ್ನ ಸಿನಿಮಾದಲ್ಲಿ ಯೂತ್ ಐಕಾನ್ ಆಗಿ ಕಾಣಿಸಿಕೊಂಡಿರುವ ಅಪ್ಪು ಸರ್ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳೊದಿಕ್ಕೆ ನಿರ್ಮಾಪಕ ವಿಜಯ್ ಕಿರಂಗದೂರು ಕಾರಣ ಎಂಬುವುದು ಡಿಸೈನರ್ ಯೋಗಿ ಮಾತು.
ಯುವರತ್ನದಲ್ಲಿ ಅಪ್ಪು ಸ್ಟೈಲಿಷ್ ಲುಕ್