ಕರ್ನಾಟಕ

karnataka

ETV Bharat / sitara

ರಶ್ಮಿ ಪ್ರಭಾಕರ್​ಗೆ ಕೊರೊನಾ: ಮನಸೆಲ್ಲಾ ನೀನೇ ನಟಿ ಹೋಂ ಕ್ವಾರಂಟೈನ್ - ರಶ್ಮಿ ಪ್ರಭಾಕರ್

ನಟಿ ರಶ್ಮಿ ಪ್ರಭಾಕರ್​ಗೆ ಕೊರೊನಾ ಸೋಂಕು ತಗುಲಿದ್ದು, 5 ದಿನದಿಂದ ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ದಿನಗಳನ್ನು ಕಳೆಯಯುವುದು ಬಹಳ ಕಷ್ವವಾಗಿದೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

Corona to Rashmi Prabhakar
ರಶ್ಮಿ ಪ್ರಭಾಕರ್​ಗೆ ಕೊರೊನಾ

By

Published : Apr 23, 2021, 8:23 PM IST

ಬೆಂಗಳೂರು: ಮನಸೆಲ್ಲಾ ನೀನೇ ನಟಿ ರಶ್ಮಿ ಪ್ರಭಾಕರ್​ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ.

ರಶ್ಮಿ ಪ್ರಭಾಕರ್​ಗೆ ಕೊರೊನಾ

ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ರಶ್ಮಿ ಬೆಂಗಳೂರಿನಿಂದ ಹೈದರಾಬಾದ್ ಪಯಣಿಸುತ್ತಿದ್ದರು. ನನಗೆ ಜ್ವರ ಇರಲಿಲ್ಲ. ಸುಸ್ತು , ತಲೆನೋವು ಹಾಗೂ ಜಾಯಿಂಟ್ ಪೇನ್​ ಇತ್ತು. ನಿಧಾನವಾಗಿ ರುಚಿ ಕಳೆದುಕೊಳ್ಳಲು ಆರಂಭಿಸಿದಾಗ ಏನೋ ತಪ್ಪಾಗಿದೆ ಎಂದುಕೊಂಡೆ. ನಂತರ ಪರೀಕ್ಷಿಸಿದೆ, ಶಾಕ್ ಆಯಿತು ಎಂದಿದ್ದಾರೆ. ರಶ್ಮಿ ತಂದೆ ಹಾಗೂ ಸಹೋದರಿಗೆ ಕೊರೊನಾ ಕಾಣಿಸಿಕೊಂಡಿದೆ. ವಯಸ್ಸಾದ ಪೋಷಕರು ಮಾತನಾಡುವಾಗ ನಡೆಯುವಾಗ ಸುಸ್ತಾದಾಗ ಬೇಸರವಾಗುತ್ತದೆ. ಕೋವಿಡ್ ಮಾನಸಿಕವಾಗಿ ಪರಿಣಾಮ ಬೀರುತ್ತದೆ ಎಂದರು.

ರಶ್ಮಿ ಪ್ರಭಾಕರ್​ಗೆ ಕೊರೊನಾ

ಈ ಐದು ದಿನಗಳು ನಮಗೆ ತುಂಬಾ ಕೆಟ್ಟದಾಗಿದ್ದವು ಎನ್ನುತ್ತಾರೆ. ಮನೆಯಲ್ಲಿ ಹಿರಿಯ ನಾಗರಿಕರು ಹಾಗೂ ವಯಸ್ಸಾದ ಪೋಷಕರು ಇದ್ದರೆ ತುಂಬಾ ಮುನ್ನೆಚ್ಚರಿಕೆಯಿಂದಿರಬೇಕು ಎನ್ನುತ್ತಾರೆ. ಮನಸೆಲ್ಲಾ ನೀನೇ ಧಾರಾವಾಹಿ ತಂಡ ಈಗ ಧಾರಾವಾಹಿ ಶೂಟಿಂಗ್ ನಿಲ್ಲಿಸಿದೆ. ತಂಡದವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ರಶ್ಮಿ ಪ್ರಾಣಾಯಾಮ ಮಾಡುತ್ತಿದ್ದಾರೆ. ನನ್ನ ತಂದೆಗೂ ಪ್ರಾಣಾಯಾಮ ಕಲಿಸುತ್ತಿದ್ದೇನೆ. ಪ್ರಾಣಾಯಾಮ ಆಮ್ಲಜನಕದ ಶುದ್ದಮಟ್ಟಕ್ಕೆ ಸಹಾಯ ಮಾಡುತ್ತದೆ. ನಾವು ಈ ಕಷ್ಟದ ಪರಿಸ್ಥಿತಿಯಲ್ಲಿ ಧನಾತ್ಮಕವಾಗಿರುವುದು ಕಷ್ಟ. ಅದೃಷ್ಟವಶಾತ್ ನಮಗೆ ದಿನಸಿ ಹಾಗೂ ಆಹಾರವನ್ನು ತರಲು ಜನರು ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ.

ರಶ್ಮಿ ಪ್ರಭಾಕರ್​ಗೆ ಕೊರೊನಾ

ABOUT THE AUTHOR

...view details