ಕರ್ನಾಟಕ

karnataka

ETV Bharat / sitara

ಪ್ರಮಿಳಾ ಜೋಷಾಯಿ, ಸುಂದರ್‌ ರಾಜ್ ಜತೆಗೆ ಮೇಘನಾ ರಾಜ್ ಮತ್ತು ​ಮಗುವಿಗೂ ಕೊರೊನಾ ಸೋಂಕು - Corona infection to the Sundar Raj family

ಮೇಘನಾ ರಾಜ್‌ ಅವರಿಗೆ ಮಗು ಆದ ಮೇಲೆ ಅದು ಚಿರು ಅಗಲಿಕೆ ನೋವನ್ನು ದೂರ ಮಾಡಿತ್ತು..

corona positive to meghana raj family
ಮೇಘನಾ ರಾಜ್ ಹಾಗೂ ​ಮಗು ಸೇರಿ ಇಡೀ ಕುಟುಂಬಕ್ಕೆ ಕೊರೊನಾ

By

Published : Dec 8, 2020, 4:39 PM IST

Updated : Dec 8, 2020, 6:13 PM IST

ಬೆಂಗಳೂರು :ನಟಿ ಮೇಘನಾ‌ ರಾಜ್ ಮತ್ತು ಮಗುವಿಗೆ ಕೊರೊನಾ‌ ಸೋಂಕು ತಗುಲಿರುವುದು ಪತ್ತೆಯಾಗಿದೆ.‌ ಈ‌ ಮೊದಲು‌‌ ನಟಿ‌ ಪ್ರಮೀಳಾ ಜೋಷಾಯಿ ಜ್ವರ ಎಂಬ‌ ಕಾರಣಕ್ಕೆ ಇತ್ತೀಚೆಗಷ್ಟೆ ಆಸ್ಪತ್ರೆಗೆ ದಾಖಲಾಗಿದ್ದರು.‌ ಈ ಸಮಯದಲ್ಲಿ ಅವರಿಗೆ ಕೊರೊನಾ ಪರೀಕ್ಷೆಗೆ ಒಳ ಪಡಿಸಿದಾಗ‌ ಕೊರೊ‌ನಾ‌ ಸೋಂಕು ತಗುಲಿರುವುದು ದೃಢವಾಗಿದೆ.

ಮನೆಯಲ್ಲಿ ಸುಂದರ್ ರಾಜ್ ಅವರಿಗೂ ಸೋಂಕು ಹರಡಿದೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಪ್ರಮಿಳಾ ಜೋಷಾಯಿ ದಾಖಲಾಗಿದ್ದಾರೆ. ಮೇಘನಾ ರಾಜ್ ಹಾಗೂ ಮಗುವಿಗೆ A ಸಿಂಪ್ಟೆಮ್ಯಾಟಿಕ್‌ ಸೋಂಕು ಹರಡಿರುವ ಕಾರಣ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ಮಗುವಿಗೆ ಕೊರೊನಾ ಪರೀಕ್ಷೆ ಬೇಡ ಎಂದಿರೋ ವೈದ್ಯರು ಇದೀಗ ತಾಯಿ ಮತ್ತು ಮಗು ಇಬ್ಬರಿಗೂ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಸರ್ಜಾ ಕುಟುಂಬ ಮತ್ತೊಂದು ಆಘಾತಕ್ಕೊಳಗಾಗಿದೆ.

ಮೇಘನಾ ರಾಜ್‌ ಅವರಿಗೆ ಮಗು ಆದ ಮೇಲೆ ಅದುಚಿರು ಅಗಲಿಕೆ ನೋವನ್ನು ದೂರ ಮಾಡಿತ್ತು. ಆದ್ರೀಗ ಪ್ರಮಿಳಾ ಜೋಷಾಯಿ, ಸುಂದರ್ ರಾಜ್, ಮೇಘನಾ ಹಾಗೂ ಮಗುವಿಗೆ ಕೊರೊನಾ ಸೋಂಕು ಹರಡಿರುವುದು ಕುಟುಂಬದಲ್ಲಿ ಆತಂಕ ತಂದಿದೆ.

Last Updated : Dec 8, 2020, 6:13 PM IST

ABOUT THE AUTHOR

...view details