ಕರ್ನಾಟಕ

karnataka

ETV Bharat / sitara

ಕನ್ನಡ ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದ ಜೂರಿ ಮೆಂಬರ್​ಗೆ ಕೊರೊನಾ - ಸಂಗೀತ ಕಾರ್ಯಕ್ರಮದ ಜೂರಿ ಮೆಂಬರ್​ಗೆ ಕೊರೊನಾ

ಖಾಸಗಿ ಕನ್ನಡ ವಾಹಿನಿಯ ಸಂಗೀತ ಕಾರ್ಯಕ್ರಮದ ಜೂರಿ ಮೆಂಬರ್​ಗೆ ಕೊರೊನಾ ಪಾಸಿಟಿವ್ ಕಾಣಿಸಿ ಕೊಂಡಿದೆ. ಈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದರ ಜೊತೆಗೆ ಹಾಡುವ ಮೂಲಕ ಎಲ್ಲರನ್ನು ರಂಜಿಸುತ್ತಿದ್ದಾರೆ.

corona-positive-to-kannada-singer
ಸಂಗೀತ ಕಾರ್ಯಕ್ರಮದ ಜೂರಿ ಮೆಂಬರ್​ಗೆ ಕೊರೊನಾ

By

Published : Jun 25, 2020, 11:29 PM IST

Updated : Jun 25, 2020, 11:35 PM IST

ಖಾಸಗಿ ಕನ್ನಡ ವಾಹಿನಿಯ ಸಂಗೀತ ಕಾರ್ಯಕ್ರಮದ ಜೂರಿ ಮೆಂಬರ್​ಗೆ ಕೊರೊನಾ ಪಾಸಿಟಿವ್ ಕಾಣಿಸಿ ಕೊಂಡಿದೆ. ಗಾಯಕಿ ಕಂ ಸಂಗೀತ ನಿರ್ದೇಶಕಿಯಾಗಿರುವ ಜೂರಿ ಮೆಂಬರ್​ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಅಂದ್ರೆ ಕೊರೊನಾಗೆ ಚಿಕಿತ್ಸೆ ಪಡೆಯಲು ದಾಖಲಾಗಿರುವ ಈ ಗಾಯಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಡು ಹಾಡುವ ಮೂಲಕ ಸಮಯ ಕಳೆಯುವುದರ ಜೊತೆಗೆ, ಜೊತೆ ಇರುವ ರೋಗಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

ಸಂಗೀತ ಕಾರ್ಯಕ್ರಮದ ಜೂರಿ ಮೆಂಬರ್​ಗೆ ಕೊರೊನಾ

ಸಹೋದರನಿಗೆ ವಿಡಿಯೋ ಕಾಲ್ ಮಾಡಿ, ಕೀ ಬೋರ್ಡ್ ನುಡಿಸುವಂತೆ ಹೇಳಿ ಗಾಯಕಿ ಆಸ್ಪತ್ರೆಯಲ್ಲಿ ಹಾಡುವ ಮೂಲಕ ಟೈಂಪಾಸ್ ಮಾಡ್ತಿದ್ದಾರೆ‌. ಐದು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ಗಾಯಕಿ ಅಮ್ಮನಿಗೆ ಕೊರೊನಾ ಸೊಂಕು ತಗುಲಿದ ಹಿನ್ನೆಲೆಯಲ್ಲಿಅಸ್ಪತ್ರೆಯ ಬಳಿ ಉಳಿದು ಕೊಳ್ಳಲು ಗಾಯಕಿ ವೈದ್ಯರ ಅನುಮತಿ ಕೇಳಿದ್ದಾರೆ. ಆ ವೇಳೆ ವೈದ್ಯರು ಅಸ್ಪತ್ರೆ ಬಳಿ ಉಳಿಯ ಬೇಕಾದ್ರೆ ಕೊರೊನಾ ಟೆಸ್ಟ್​ ಮಾಡಿಸಿ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಕೋವಿಡ್ ಟೆಸ್ಟ್​ ಮಾಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ.

ಹೀಗಾಗಿ ಐದು ದಿನಗಳಿಂದ ಈ ಗಾಯಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವದರ ಜೊತೆಹಾಡು ಹಾಡಿ ರೋಗಿಗಳಲ್ಲಿ ಹೊಸ ಚೈತನ್ಯ ತುಂಬುತಿದ್ದಾರೆ.

Last Updated : Jun 25, 2020, 11:35 PM IST

ABOUT THE AUTHOR

...view details