ಒಂದಿಲ್ಲೊಂದು ವಿವಾದಗಳನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಿರುವ ಕಂಗನಾ ರಣಾವತ್ ಇದೀಗ ಕಳ್ಳತನದ ಆರೋಪವನ್ನು ಎದುರಿಸುವಂತಾಗಿದೆ. ಕಂಗನಾ ತಮ್ಮ ಮುಂದಿನ ಸಿನಿಮಾಕ್ಕೆ ಕಥೆಯೊಂದನ್ನು ಕಳ್ಳತನ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ.
ಕಂಗನಾ ಮೇಲೆ ಕಳ್ಳತನದ ಆರೋಪ! - kangana ranaut upcoming film
ಕಂಗನಾ ರಣಾವತ್ ಮೇಲೆ ಕಳ್ಳತನದ ಆರೋಪ ಕೇಳಿ ಬಂದಿದ್ದು, ಅವರ ಮುಂದಿನ ಸಿನಿಮಾಕ್ಕೆ ಕಥೆಯನ್ನು ಕಳ್ಳತನ ಮಾಡಿದ್ದಾರೆ ಎಂದು ಅನೀಶ್ ಆರೋಪ ಮಾಡಿದ್ದಾರೆ.
ಹೌದು ಕಂಗನಾ ರಣಾವತ್ ಇದೇ ಜನವರಿ 14ರಂದು(ಸಂಕ್ರಾಂತಿ ಹಬ್ಬದ ದಿನ) ತಮ್ಮ ಮುಂದಿನ ಸಿನಿಮಾ ಮಣಿಕರ್ಣಿಕಾ ರಿಟರ್ನ್ : ದಿ ಲೆಜೆಂಡ್ ಆಫ್ ದಿಡ್ಡ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಚಿತ್ರ ಘೋಷಣೆಯಾಗುತ್ತಿದ್ದಂತೆ ಬರಹಗಾರ ಅನಿಶ್ ಕೌಲ್ ತನ್ನ ಪುಸ್ತಕದ ಕಥೆಯನ್ನು ಕಂಗನಾ ಕದ್ದಿದ್ದಾರೆ. ನಾನು ದಿಡ್ಡ : ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ್ ಎಂಬ ಪುಸ್ತಕವನ್ನು ಬರೆಯುತ್ತಿದ್ದೇನೆ. ಅಲ್ಲದೇ ಈ ಪುಸ್ತಕದ ಮುನ್ನುಡಿ ಬರೆಯಲು ಕಂಗನಾರಿಗೆ ಹೇಳಿದೆ. ಆದ್ರೆ ಇದೀಗ ಇದೇ ಪುಸ್ತಕದ ಕಥೆಯನ್ನು ಕಂಗನಾ ತಮ್ಮ ಮುಂದಿನ ಸಿನಿಮಾಕ್ಕಾಗಿ ಕದ್ದಿದ್ದಾರೆ. ಇದನ್ನು ನಾನು ಬೌದ್ಧಿಕ ಕಳ್ಳತನ ಎಂದು ಕರೆಯುತ್ತೇನೆ ಎಂದಿದ್ದಾರೆ.
ಮತ್ತೊಂದು ಆರೋಪ ಮಾಡಿರುವ ಅನಿಶ್ ಸಮಾಜದಲ್ಲಿ ಕಂನಾಗೆ ಒಂದೊಳ್ಳೆ ಹೆಸರಿಗೆ, ಗೌರವವಿದೆ. ಆದ್ರೆ ನನ್ನ ಏಕೃಕ ಹಕ್ಕು ಸ್ವಾಮ್ಯದಲ್ಲಿರುವ ದಿಡ್ಡ : ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ್ ಪುಸ್ತಕದಿಂದ ಕಥೆಯನ್ನು ಕದ್ದಿರುವುದು ಸರಿಯಲ್ಲ ಎಂದಿದ್ದಾರೆ.