ಕರ್ನಾಟಕ

karnataka

ETV Bharat / sitara

'ಯುವರತ್ನ'ನ ಅಡ್ಡಾದಲ್ಲಿ ಕಾನ್ಸ್​​​​ಟೇಬಲ್​​​ ಸರೋಜ: ಭಾರೀ ಕುತೂಹಲ ಮೂಡಿಸಿದ ಫೋಟೋ - undefined

ಕೆಲವು ದಿನಗಳ ಹಿಂದೆ ಚಿತ್ರವೊಂದರ ಶೂಟಿಂಗ್ ವೇಳೆ ವಿಚಿತ್ರವಾಗಿ ವರ್ತಿಸಿ ಸುದ್ದಿ ಮಾಡಿದ್ದ ನಟಿ ತ್ರಿವೇಣಿ ಇದೀಗ ಪುನೀತ್ ರಾಜ್​ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಅಡ್ಡಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

'ಯುವರತ್ನ'

By

Published : Jun 12, 2019, 8:14 PM IST


'ಟಗರು' ಸಿನಿಮಾದಲ್ಲಿ ಕಾನ್ಸ್​​​​​ಟೇಬಲ್​ ಸರೋಜ ಪಾತ್ರ ಮಾಡಿದ್ದ ತ್ರಿವೇಣಿ ಇತ್ತೀಚೆಗೆ ಸ್ಯಾಂಡಲ್​ವುಡ್​​​​​ನಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ನಟಿ. ದುನಿಯಾ ಸೂರಿ ನಿರ್ದೇಶನದ, 'ಟಗರು' ಮೂಲಕ ಖ್ಯಾತಿ ಗಳಿಸಿದ ನಟಿ ತ್ರಿವೇಣಿ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪುನೀತ್ ರಾಜ್​ಕುಮಾರ್, ತ್ರಿವೇಣಿ

ಇತ್ತೀಚೆಗೆ ತ್ರಿವೇಣಿ 'ಯುವರತ್ನ' ಚಿತ್ರದ ಅಡ್ಡಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಚಿತ್ರೀಕರಣ ವೇಳೆ ವಿಚಿತ್ರವಾಗಿ ವರ್ತಿಸಿ ಸುದ್ದಿ ಮಾಡಿದ್ದ ತ್ರಿವೇಣಿ ಈಗ ಇದ್ದಕ್ಕಿದ್ದಂತೆ ಪುನೀತ್​​ ರಾಜ್​​​​​​ಕುಮಾರ್ ಜೊತೆ ಕಾಣಿಸಿಕೊಂಡಿದಲ್ಲದೆ, ಪವರ್ ಸ್ಟಾರ್ ಹೆಗಲ‌ ಮೇಲೆ‌ ಕೈ ಹಾಕಿ ಫೋಟೋ ಕೂಡಾ ತೆಗೆಸಿಕೊಂಡಿದ್ದಾರೆ. ತ್ರಿವೇಣಿ 'ಯುವರತ್ನ' ಚಿತ್ರದಲ್ಲಿ ಕೂಡಾ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಚಿತ್ರದಲ್ಲಿ ಯಾವ ಪಾತ್ರ ಅನ್ನೋದು ಇನ್ನೂ ತಿಳಿದುಬಂದಿಲ್ಲ.

ಇನ್ನೊಂದು ಕಡೆ ಡಾಲಿ ಧನಂಜಯ್ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹಾಗಾಗಿ ಈ ಚಿತ್ರದಲ್ಲೂ ಡಾಲಿಗೆ ಸರೋಜ ಜೋಡಿ ಆಗ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ಯಕ್ಕೆ 'ಯುವರತ್ನ' ಚಿತ್ರತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಚಿತ್ರದ ಪ್ರಮುಖ ಭಾಗವನ್ನು ಮೈಸೂರಿನ ಕೆಲವು ಸುಂದರ ತಾಣಗಳಲ್ಲಿ‌ ನಿರ್ದೇಶಕ ಸಂತೋಷ್ ಆನಂದ್​​​​​​​​​​​​​​​​​​ರಾಮ್ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. ಇನ್ನು ಪವರ್ ಸ್ಟಾರ್ ಜೊತೆ ಸಯೇಶಾ ಸೈಗಲ್ ಡ್ಯೂಯೇಟ್ ಹಾಡುತ್ತಿದ್ದಾರೆ. ಕೆಜಿಎಫ್ ನಿರ್ಮಿಸಿದ್ದ ಹೊಂಬಾಳೆ ಫಿಲಮ್ಸ್ ಸಂಸ್ಥೆ ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದೆ.

For All Latest Updates

TAGGED:

ABOUT THE AUTHOR

...view details