ನವದೆಹಲಿ:ಪ್ರಧಾನಿ ಮೋದಿ ಬಯೋಪಿಕ್ ಸಿನಿಮಾ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದು ಚಿತ್ರವನ್ನು ಚುನಾವಣೆಯ ಬಳಿಕ ಅಂದರೆ ಮೇ 19ರ ನಂತರ ಬಿಡುಗಡೆ ಮಾಡಬೇಕು ಎಂದು ಚುನಾವಣಾ ಆಯೋಗದ ಮುಂದೆ ಮನವಿ ಸಲ್ಲಿಸಿದೆ.
ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಈ ವೇಳೆ ಮೋದಿ ಬಯೋಪಿಕ್ ಬಿಡುಗಡೆ ಮಾಡುವಂತಿಲ್ಲ, ಒಂದು ವೇಳೆ ಚಿತ್ರ ರಿಲೀಸ್ ಆದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂದು ಕಾರಣ ನೀಡಿ ಚಿತ್ರದ ಬಿಡುಗಡೆ ಮುಂದೂಡಬೇಕೆಂದು ಕಾಂಗ್ರೆಸ್ ಮನವಿ ಮಾಡಿದೆ.