ನಿನ್ನೆ ವಿಶ್ವಾಸಮತ ಯಾಚನೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಹಿನ್ನಡೆಯಾಗುತ್ತಿದ್ದಂತೆ, ಬಹಳ ದಿನಗಳಿಂದ ಕಾಣೆಯಾಗಿದ್ದ ಅತೃಪ್ತ ಶಾಸಕರು ತಾವು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಕಾಂಗ್ರೆಸ್ ಅತೃಪ್ತ ಶಾಸಕ ಮುನಿರತ್ನ ಹೈದರಾಬಾದ್ನಲ್ಲಿ ಪ್ರತ್ಯಕ್ಷವಾಗಿದ್ದಾರೆ.
14 ದಿನದ ನಂತರ ಹೈದರಾಬಾದ್ನಲ್ಲಿ ಪ್ರತ್ಯಕ್ಷವಾದ ಕಾಂಗ್ರೆಸ್ ಅತೃಪ್ತ ಶಾಸಕ ಮುನಿರತ್ನ.. - undefined
ಕಳೆದ ಕೆಲವು ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದ ಕಾಂಗ್ರೆಸ್ ಶಾಸಕ ಮುನಿರತ್ನ, ಸರ್ಕಾರ ಬೀಳುತ್ತಿದ್ದಂತೆ ಇಂದು ಹೈದರಾಬಾದ್ನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾಗಿದ್ದಾರೆ.
14 ದಿನಗಳ ನಂತರ ಅಜ್ಞಾತ ಸ್ಥಳದಲ್ಲಿದ್ದ ಮುನಿರತ್ನ, ಬಹುತಾರಾಗಣದ 'ಕುರುಕ್ಷೇತ್ರ' ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಹೈದರಾಬಾದ್ನಲ್ಲಿ ನಡೆದ ಕುರುಕ್ಷೇತ್ರ ಚಿತ್ರದ ತೆಲುಗು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗಿಯಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅತೃಪ್ತರ ಜೊತೆ ಸೇರಿ ರೆಸಾರ್ಟ್ ಸೇರಿದ್ದ ಮುನಿರತ್ನ ಇಂದು ದಿಡೀರ್ ಎಂದು ಪ್ರತ್ಯಕ್ಷವಾಗಿದ್ದಾರೆ. ಹೈದರಾಬಾದ್ನ AMB ಮಲ್ಟಿಫ್ಲೆಕ್ಸ್ನಲ್ಲಿ ನಡೆದ 'ಕುರುಕ್ಷೇತ್ರ' ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಮಧ್ಯಾಹ್ನವಷ್ಟೇ ಕುರುಕ್ಷೇತ್ರದ ಹೊಸ ಟ್ರೇಲರ್ ಕೂಡಾ ಲಾಂಚ್ ಆಗಿದೆ. ಮುನಿರತ್ನ ಜೊತೆ ದರ್ಶನ್, ರಾಕ್ಲೈನ್ ವೆಂಕಟೇಶ್, ಸೋನುಸೂದ್, ಅರ್ಜುನ್ ಸರ್ಜಾ ಹಾಗೂ ಇನ್ನಿತರರಿದ್ದಾರೆ.ಅಗಸ್ಟ್ 2 ರಂದು5 ಭಾಷೆಗಳಲ್ಲಿ 'ಕುರುಕ್ಷೇತ್ರ' ಚಿತ್ರ ಬಿಡುಗಡೆಯಾಗಲಿದೆ.