ಬಾಲಿವುಡ್ ನಟಿ ರಿಯಾ ಚಕ್ರವರ್ತಿ ತಂದೆ ಇಂದ್ರಜಿತ್ ಚಕ್ರವರ್ತಿ ತಮ್ಮ ಮಗನಾದ ಶೋವಿಕ್ ಚಕ್ರವರ್ತಿ ಬಂಧನ ಖಂಡಿಸಿ ಹೇಳಿಕೆ ನೀಡಿದ್ದಾರೆ. ಸದ್ಯ ನನ್ನ ಮಗನನ್ನು ಬಂಧಿಸಿದ್ದು ಮುಂದಿನ ದಿನಗಳಲ್ಲಿ ನನ್ನ ಮಗಳನ್ನೂ ಬಂಧಿಸುತ್ತಾರೆ ಎಂದಿದ್ದಾರೆ.
ಈ ಬಗ್ಗೆ ನೋವನ್ನು ತೋಡಿಕೊಂಡಿರುವ ಇಂದ್ರಜಿತ್, ಅಭಿನಂದನೆಗಳು ಭಾರತ ನನ್ನ ಮಗನನ್ನು ಬಂಧಿಸಿದ್ದಕ್ಕಾಗಿ. ಮುಂದಿನ ದಿನಗಳಲ್ಲಿ ನನ್ನ ಮಗಳನ್ನು ಬಂಧಿಸುವಿರಿ ನಂತರ ಯಾರು ಎಂಬುದು ಗೊತ್ತಿಲ್ಲ ಎಂದಿದ್ದಾರೆ. ನೀವು ಮಧ್ಯಮ ವರ್ಗದ ಕುಟುಂಬಗಳನ್ನು ತುಳಿಯುತ್ತಿದ್ದೀರಿ. ಆದರೆ ಸಹಜವಾಗಿ, ನ್ಯಾಯದ ಸಲುವಾಗಿ ಎಲ್ಲವೂ ಸಮರ್ಥನೆಯಾಗಿದೆ. ಜೈ ಹಿಂದ್ ಎಂದು ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆಯ ಭಾಗವಾಗಿ ಶೋಯಿಕ್ ಅವರನ್ನು ಬಂಧಿಸಿದ ಒಂದು ದಿನದ ನಂತರ ಇಂದ್ರಜಿತ್ ಚಕ್ರವರ್ತಿ ಹೇಳಿಕೆ ನೀಡಿದ್ದಾರೆ. ಇನ್ನು ದಿವಂಗತ ನಟನ ಮನೆ ಮ್ಯಾನೇಜನರ್ ಸ್ಯಾಮ್ಯುಯೆಲ್ ಮಿರಾಂಡಾರನ್ನು ಸೆಪ್ಟೆಂಬರ್ 9 ರವರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಶಕ್ಕೆ ಪಡೆದಿದೆ.
ಇನ್ನು ಸುಶಾಂತ್ ಸಿಂಗ್ ಪ್ರೇಯಸಿಯಾಗಿದ್ದ ರಿಯಾರನ್ನು ಭಾನುವಾರ ಎನ್‌ಸಿಬಿ ತಂಡ ವಿಚಾರಣೆಗೆ ಕರೆಸಿದೆ. ಈ ಹಿನ್ನೆಲೆಯಲ್ಲೆ ರಿಯಾ ಪರವಾದ ವಕೀಲ ಸತೀಶ್ ಮನಿಶಂದೆ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಸತೀಶ್, ಪ್ರೀತಿಸಿದ್ದು ಅಪರಾಧ ಎಂದಾದರೆ ರಿಯಾ ಅವರು ಬಂಧನಕ್ಕೆ ಸಿದ್ಧರಾಗಿದ್ದಾರೆ ಎಂದಿದ್ದಾರೆ.
ಅವರು ನಿರಪರಾಧಿಯಾಗಿದ್ದರಿಂದ ಸಿಬಿಐ, ಇಡಿ ಮತ್ತು ಎನ್‌ಸಿಬಿಯೊಂದಿಗೆ ಬಿಹಾರ ಪೊಲೀಸರು ಆರೋಪಿಸಿರುವ ಎಲ್ಲಾ ಪ್ರಕರಣಗಳಲ್ಲಿ ಅವರು ನಿರೀಕ್ಷಣಾ ಜಾಮೀನಿಗಾಗಿ ಯಾವುದೇ ನ್ಯಾಯಾಲಯವನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ.