ರಾಜಕೀಯ ನಾಯಕರು ಸಭೆ ಸಮಾರಂಭಗಳಲ್ಲಿ ಮಿಸ್ಟೇಕ್ ಮಾಡ್ಕೊಂಡು ಯಾರದೋ ಹೆಸರು ಹೇಳಲು ಹೋಗಿ ಇನ್ಯಾರದೋ ಹೆಸರನ್ನು ಹೇಳುವುದು ಇತ್ತೀಚೆಗೆ ಕಾಮನ್ ಆಗಿದೆ. ನಮ್ಮ ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮವೊಂದ್ರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅನ್ನುವ ಬದಲು ಕಿತ್ತೂರು ರಾಣಿ ಜಯಮ್ಮ ಅಂತ ಹೇಳಿ ಇತ್ತೀಚೆಗೆ ನಗೆಪಾಟಲಿಗೀಡಾಗಿದ್ದರು.
ಸಾಹೇಬ್ರೆ, ಅದು ಪ್ರಿಯಾಂಕ ಚೋಪ್ರಾ ಅಲ್ಲ, ಪ್ರಿಯಾಂಕ ಗಾಂಧಿ! - ಕಾಂಗ್ರೆಸ್ ಮಾಜಿ ಶಾಸಕ ಸುರೇಂದರ್ ಕುಮಾರ್
ದೆಹಲಿಯಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಸುರೇಂದರ್ ಕುಮಾರ್ ಕಾಂಗ್ರೆಸ್ ಪರ ಸ್ಲೋಗನ್ ಕೂಗುವ ಬರದಲ್ಲಿ ಮಿಸ್ಟೇಕ್ ಮಾಡ್ಕೊಂಡು ಪ್ರಿಯಾಂಕ ಚೋಪ್ರಾ ಅವರನ್ನು ಜಪಿಸಿದ್ದಾರೆ.
ಇದೀಗ ಇಂತಹದ್ದೇ ಹಾಸ್ಯಮಯ ತಪ್ಪು ನಡೆದಿದೆ. ಅಯ್ಯೋ ಮತ್ತೆ ಇವಾಗೇನಾಯ್ತು ಅಂದ್ರಾ? ಇದು ನಮ್ಮ ರಾಜ್ಯದ ಮಿಸ್ಟೇಕ್ ಅಲ್ಲ ಸ್ವಾಮಿ, ದೆಹಲಿಯಲ್ಲಾಗಿರೋ ಕತೆ. ಹೌದು ಕಾಂಗ್ರೆಸ್ನ ಮಾಜಿ ಶಾಸಕ ಸುರೇಂದರ್ ಕುಮಾರ್ ಕಾಂಗ್ರೆಸ್ ಪರ ಘೋಷಣೆ ಕೂಗುವ ಬರದಲ್ಲಿ ಯಡವಟ್ಟು ಮಾಡ್ಕೊಂಡು ಪ್ರಿಯಾಂಕ ಚೋಪ್ರಾ ಎಂದಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪರ ಅವರು ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಎಂಎಲ್ಎ ಸುರೇಂದರ್ ಕುಮಾರ್, ಸೋನಿಯಾ ಗಾಂಧಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್ ಎನ್ನುತ್ತಾ ಕೊನೆಯದಾಗಿ ಪ್ರಿಯಾಂಕ ಗಾಂಧಿ ಜಿಂದಾಬಾದ್ ಎನ್ನುವ ಬದಲು ಪ್ರಿಯಾಂಕ ಚೋಪ್ರಾ ಜಿಂದಾಬಾದ್! ಎಂದು ಕೂಗಿ ಅಲ್ಲಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.