ಡಾ.ವಿ. ನಾಗೇಂದ್ರ ಪ್ರಸಾದ್ ಅವರು 2017ರ ಜುಲೈನಲ್ಲಿ ಕನ್ನಡ ನಿರ್ದೇಶಕ ಸಂಘದ ಅಧ್ಯಕ್ಷರಾಗಿದ್ದರು. ಬಳಿಕ 2018 ರಲ್ಲಿ ಮತ್ತೆ ಅವರೇ ಮುಂದುವರೆದರು. ಈಗ ಚುನಾವಣೆಗೂ ಮುಂಚೆಯೇ ಅವರು ಅಧ್ಯಕ್ಷ ಸ್ಥಾನವನ್ನು ಟಿ.ಸಿ. ವೆಂಕಟೇಶ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.ಈ ಬಗ್ಗೆ ವೆಂಕಟೇಶ್ ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ನಾಗೇಂದ್ರ ಪ್ರಸಾದ್ ಅವರು ಎರಡು ವರ್ಷದ ಅವಧಿಯಲ್ಲಿ ಕಾನ್ಫಿಡ (ಕನ್ನಡ ಫಿಲ್ಮ್ ಡೈರಕ್ಟರ್ಸ್ ಅಸ್ಸೋಸಿಯೇಶನ್) ಕಚೇರಿ ಸ್ಥಾಪನೆ, ಕ್ಯಾಲೆಂಡರ್, ಡೈರಿ ಹಾಗೂ ಸಹಾಯಕ ನಿರ್ದೇಶಕರಿಗೆ ಸಂಘದ ಮಾನ್ಯತೆ ದೊರಕಿಸಿಕೊಟ್ಟಿದ್ದಾರೆ. ನಾಗೇಂದ್ರ ಪ್ರಸಾದ್ ಅವಧಿಯಲ್ಲಿ ನಿರ್ದೇಶಕರ ಸಂಘದ ಕಟ್ಟಡ ಮಾತ್ರ ಆಗಿಲ್ಲ ಎಂಬುವುದು ನಿಜ. ಆದ್ರೆ ಈ ಕುರಿತು ಸರ್ಕಾರಕ್ಕೆ ಮನವಿಯನ್ನು ಪತ್ರದ ಮುಖೇನ ಮಾಡಲಾಗಿದೆ.
ಮೂಲಗಳ ಪ್ರಕಾರ ಕನ್ನಡ ಚಲನಚಿತ್ರ ನಿರ್ದೇಶಕ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ನಿರ್ದೇಶಕ, ಗೀತ ಸಾಹಿತಿ, ಸಂಗೀತ ನಿರ್ದೇಶಕ ಹಾಗೂ ನಟರಾಗಿದ್ದರು. ಅವರ ಈ ಬಹುಮುಖ ಚಟುವಟಿಕೆಗಳು ಅವರನ್ನು ಕಟ್ಟಿ ಹಾಕಿತ್ತು ಅಂತಲೂ ಹೇಳಲಾಗುತ್ತಿದೆ. ಅವರಿಗೆ ಸಮಯ ಇಲ್ಲದಿದ್ದರಿಂದ ಸಹಜವಾಗಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಕಳೆದ ವರ್ಷ ಚುನಾವಣೆ ಆದಾಗ ರೂಪ ಅಯ್ಯರ್ ಹಾಗೂ ಸಾಧು ಕೋಕಿಲ ಉಪಾಧ್ಯಕ್ಷರಾಗಿದ್ದರು. ಇವರ ಜೊತೆಗೆ ನಿರ್ದೇಶಕರುಗಳಾದ ನಾಗೇಂದ್ರ ಅರಸ್, ಶರಣ್ ಕಬ್ಬುರ್, ಟಿ.ಎನ್. ನಾಗೇಶ್, ಕವಿರಾಜ್, ಮಳವಳ್ಳಿ ಸಾಯಿ ಕೃಷ್ಣ, ರವಿ ಶ್ರೀವತ್ಸ, ಮುಸ್ಸಂಜೆ ಮಹೇಶ್ ಹಾಗೂ ಎಂ. ಡಿ. ಕೌಶಿಕ್ ಸಹ ಕಮಿಟಿಯಲ್ಲಿ ಆಯ್ಕೆ ಆಗಿದ್ದರು.
ಅಂದಹಾಗೆ ಟಿ.ಸಿ. ವೆಂಕಟೇಶ್ ಹೋರಾಟದ ಸ್ವಭಾವ ಹೊಂದಿರುವವರು. ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ವಿರುದ್ಧ ದಾವೆ ಹೂಡಿದ್ದರು.