ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಮಾ ಆನಂದ್ ಶೀಲಾ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಾ ಆನಂದ್ ಶೀಲಾ ಪಾತ್ರಕ್ಕೆ ಪ್ರಿಯಾಂಕಾ ಬಣ್ಣ ಹಚ್ಚುತ್ತಾರೆ ಎಂದು ಹೇಳಲಾಗಿದೆ.
ಮಾ ಆನಂದ್ ಶೀಲಾ ಪಾತ್ರದಲ್ಲಿ ಕಾಣಿಸ್ತಾರಂತೆ ಪ್ರಿಯಾಂಕಾ ಚೋಪ್ರಾ - ಮಾ ಆನಂದ್ ಶೀಲಾ
ಪ್ರಿಯಾಂಕಾ ಚೋಪ್ರಾ ಅವರು ಮಾ ಆನಂದ್ ಶೀಲಾ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮಾ ಆನಂದ್ ಶೀಲಾ ಪಾತ್ರಕ್ಕೆ ಪ್ರಿಯಾಂಕಾ ಬಣ್ಣ ಹಚ್ಚುತ್ತಾರೆ ಎಂದು ಹೇಳಲಾಗ್ತಿದೆ.
ಮಾ ಆನಂದ್ ಶೀಲಾ ಪಾತ್ರದಲ್ಲಿ ಕಾಣಿಸ್ತಾರಂತೆ ಪ್ರಿಯಾಂಕ ಚೋಪ್ರಾ!
ಆನಂದ ಶೀಲಾ ಭಾರತದ ಅಧ್ಯಾತ್ಮ ಗುರು ಓಶೋ ಅವರ ಶಿಷ್ಯೆ. ಇವರು ಹಲವು ವಿವಾದಗಳಲ್ಲಿ ಸಿಲುಕಿದ್ದ ಮಹಿಳೆ. ಅಲ್ಲದೆ ಇವರ ಮೇಲೆ ಹಲವು ಬಾರಿ ಕೊಲೆ ಪ್ರಯತ್ನಗಳೂ ನಡೆದಿವೆ. ಶೀಲಾ ಅಮೆರಿಕದಲ್ಲಿ ರಜನೀಶ್ ಪಂಥವನ್ನು ಹೆಚ್ಚು ಜನಪ್ರಿಯಗೊಳಿಸಿದ್ದರು. ಇದೀಗ ಇವರ ಬಗ್ಗೆ ಸಿನಿಮಾ ಒಂದು ನಿರ್ಮಾಣವಾಗುತ್ತಿದ್ದು, ಮುಖ್ಯ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಬೆರ್ರಿ ಲೆವಿನ್ಸನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.