ಕರ್ನಾಟಕ

karnataka

ETV Bharat / sitara

ಚಿತ್ರೀಕರಣದ ವೇಳೆ ಹಾವಿಗೆ ತೊಂದರೆ ನೀಡಿದ ಆರೋಪ...ನಟ ಸಿಂಬು ವಿರುದ್ಧ ದೂರು - Easwaran actor Simbu

'ಈಶ್ವರನ್' ಚಿತ್ರೀಕರಣದ ಸಮಯದಲ್ಲಿ ಹಾವಿಗೆ ಹಿಂಸೆ ನೀಡಿದ ಆರೋಪದಡಿ ತಮಿಳು ನಟ ಸಿಂಬು ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ. ಶರವಣ ಕೃಷ್ಣಮೂರ್ತಿ ಎಂಬುವವರು ಸಿಂಬು ವಿರುದ್ಧ ದೂರು ನೀಡಿದ್ದಾರೆ.

Complaint against Tamil actor Simbu
ಸಿಂಬು ವಿರುದ್ಧ ದೂರು

By

Published : Nov 5, 2020, 11:31 AM IST

ಆಗ್ಗಾಗ್ಗೆ ವಿವಾದಗಳಿಂದ ಸುದ್ದಿ ಆಗುವ ತಮಿಳು ನಟ ಸಿಂಬು ಮೇಲೆ ಮತ್ತೊಂದು ಸಮಸ್ಯೆ ಎರಗಿದೆ. ಚಿತ್ರೀಕರಣದಲ್ಲಿ ಪ್ರಾಣಿ, ಪಕ್ಷಿಗಳಿಗೆ ತೊಂದರೆ ಮಾಡಬಾರದು ಎಂಬ ಕಾನೂನು ಇದೆ. ಆದರೆ ಸಿಂಬು ಹಾವೊಂದಕ್ಕೆ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಮಿಳು ನಟ ಸಿಂಬು

'ಈಶ್ವರನ್' ಚಿತ್ರದಲ್ಲಿ ಹಾವನ್ನು ಕತ್ತಿನ ಸುತ್ತ ಸುತ್ತಿಕೊಳ್ಳುವ ದೃಶ್ಯವಿದೆ. ಈ ರೀತಿಯ ಚಿತ್ರೀಕರಣಕ್ಕಾಗಿ ಕೆಲವೊಂದು ಷರತ್ತುಗಳಿವೆ. ಸಿನಿಮಾ ಚಿತ್ರೀಕರಣದಲ್ಲಿ ಪ್ರಾಣಿ, ಪಕ್ಷಿಗಳನ್ನು ಬಳಸಿಕೊಳ್ಳುವಾಗ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಅದೇ ರೀತಿ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಹಿಂಸೆ ಮಾಡುವಂತಿಲ್ಲ ಎಂಬ ಕಾನೂನಿದೆ. ಆದರೆ ಸಿಂಬು ಚಿತ್ರೀಕರಣದ ಸಮಯದಲ್ಲಿ ಹಾವನ್ನು ಹಿಡಿದು ಅದನ್ನು ಚೀಲದೊಳಗೆ ಹಾಕುತ್ತಿರುವ ವಿಡಿಯೋ ಇತ್ತೀಚೆಗೆ ಇಂಟರ್​ನೆಟ್​ನಲ್ಲಿ ವೈರಲ್ ಆಗಿತ್ತು. ಸಿಂಬು ಹೀಗೆ ಹಾವನ್ನು ಹಿಡಿಯುವಾಗ ಸುತ್ತಲೂ ನಿಂತಿದ್ದವರು ಹೆದರಿದ್ದರು. ಸಿಂಬು ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶರವಣ ಕೃಷ್ಣಮೂರ್ತಿ ಎಂಬುವವರು ಸಿಂಬು ವಿರುದ್ಧ ದೂರು ನೀಡಿದ್ದಾರೆ.

'ಈಶ್ವರನ್'

ತಮಿಳು ನಟ ಸಿಂಬು ಕರ್ನಾಟಕದಲ್ಲಿ ಕೂಡಾ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡದ 'ಇರುವುದೆಲ್ಲವ ಬಿಟ್ಟು' ಚಿತ್ರದ 'ಕುಣಿಸಿ ತಕತ ಕುಣಿರಿ ತಕತೈ...' ಎಂಬ ಹಾಡನ್ನು ಸಿಂಬು ಹಾಡಿ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. 'ಈಶ್ವರನ್' ಚಿತ್ರಕ್ಕಾಗಿ ಸುಮಾರು 30 ಕಿಲೋ ತೂಕ ಇಳಿಸಿಕೊಂಡು ಕೂಡಾ ಸಿಂಬು ಸುದ್ದಿಯಾಗಿದ್ದರು. ಸಿಂಬು ವಿರುದ್ಧ ಅರಣ್ಯ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.

ABOUT THE AUTHOR

...view details