ಕರ್ನಾಟಕ

karnataka

ETV Bharat / sitara

'ಭರಾಟೆ'ಗೋಸ್ಕರ ಗಿರಿ 'ಗೀತಾ'ಳನ್ನ ಮಿಸ್​ ಮಾಡ್ಕೊಂಡ್ರಾ? - ಹಾಸ್ಯ ನಟ ಗಿರಿ

ಹಾಸ್ಯ ನಟ ಗಿರಿ ಮೊದಲು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗೀತಾ’ ಚಿತ್ರಕ್ಕೆ ಆಯ್ಕೆಯಾಗಿದ್ದರು. ಅಷ್ಟು ಹೊತ್ತಿಗೆ ಇವರೇ ಬೇಕು ಎಂದು ‘ಭರಾಟೆ’ ಚಿತ್ರ ತಂಡದಿಂದ ಬುಲಾವ್ ಸಹ ಬಂದಿತು. ಆಗ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ಬದಲು ‘ಭರಾಟೆ’ ಸಿನಿಮಾ ಮಾಡಲು ಒಪ್ಪಿಗೆ ನೀಡಿದರಂತೆ.

"ಭರಾಟೆ"ಗೋಸ್ಕರ ಗಿರಿ "ಗೀತಾ"ಳನ್ನ ಮಿಸ್​ ಮಾಡ್ಕೊಂಡ್ರಾ..?

By

Published : Sep 25, 2019, 10:56 PM IST

ಕನ್ನಡದಲ್ಲಿ ಹಾಸ್ಯ ನಟ ಗಿರಿ ಈಗ ಬಹುತೇಕ ಎಲ್ಲ ನಾಯಕ ನಟರುಗಳ ಸೈಡ್ ಕಿಕ್ ನಟ ಆಗಿಬಿಟ್ಟಿದ್ದಾರೆ. ಇವರಿಗೆ ಡಿಮಾಂಡ್ ಎಷ್ಟು ಇದೆ ಅಂದರೆ ನಾಯಕ ನಟರುಗಲೇ ಇವರನ್ನು ಕನ್ನಡ ಸಿನಿಮಾಗಳಿಗೆ ಕರೆಸಿಕೊಳ್ಳುತ್ತಿರುವ ಉದಾಹರಣೆ ಇವೆ.

ಇತ್ತೀಚಿನ ಉದಾಹರಣ ಸ್ವತಃ ಗಿರಿ ಅವರೇ ಹೇಳಿಕೊಂಡಿದ್ದಾರೆ. ಗಿರಿ ಮೊದಲು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗೀತಾ’ ಚಿತ್ರಕ್ಕೆ ಆಯ್ಕೆ ಆದರು. ಅಷ್ಟು ಹೊತ್ತಿಗೆ ಇವರೇ ಬೇಕು ಎಂದು ‘ಭರಾಟೆ’ ಚಿತ್ರ ತಂಡದಿಂದ ಬುಲಾವ್ ಸಹ ಬಂದಿತು. ಆಗ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ಬದಲು ‘ಭರಾಟೆ’ ಸಿನಿಮಾ ಮಾಡಲು ಒಪ್ಪಿಗೆ ನೀಡಿದರು.

ಗಿರಿ ‘ಭರಾಟೆ’ ಸಿನಿಮಾದಲ್ಲಿ ನಾಯಕ ಶ್ರೀಮುರಳಿ ಜೊತೆ ಆರಂಭದಿಂದ ಕೊನೆಯವರೆವಿಗೂ ಇದ್ದಾರಂತೆ. ಇವರ ಗಾತ್ರಕ್ಕೆ ಪಾತ್ರ ಸಹ ದೊಡ್ಡದು. ಅದನ್ನು ತಿಳಿದೇ ಗೋಲ್ಡನ್ ಸ್ಟಾರ್ ಗಣೇಶ್ ಗಿರಿ ಅವರನ್ನು ಗೀತಾ ಬದಲು ‘ಭರಾಟೆ’ ಆಯ್ಕೆ ಮಾಡಿಕೊಳ್ಳಲು ಹೇಳಿದ್ದಾರೆ. ಗಿರಿ ‘ಭರಾಟೆ’ ಹಾಡಿನಲ್ಲಿ ಸಹ ಆಲೋಕ್ ಜೊತೆ ಪಶ್ಚಿಮಾತ್ಯ ಉಡುಗೆ ತೊಟ್ಟು ಹಾಡಿದ್ದಾರೆ. ರಾಜಸ್ಥಾನದಲ್ಲಿ ಚಿತ್ರೀಕರಣ ಬಹಳ ಕಷ್ಟ ಆಯಿತು. ನಾನು ಮೊದಲೇ ಕಪ್ಪು. ಅಲ್ಲಿಯ ಬಿಸಿಲಿಗೆ ಪರೋಟ ರೀತಿ ಬೆಂದು ಹೋಗಿದ್ದೆ. ಆದರೆ, ನನ್ನನ್ನು ಛಾಯಾಗ್ರಾಹಕ ಚೆನ್ನಾಗಿಯೇ ತೋರಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ABOUT THE AUTHOR

...view details