ಕರ್ನಾಟಕ

karnataka

ETV Bharat / sitara

ಕುಂಬಳಕಾಯಿ ಹೊಡೆದ‌ ಬಿರಾದಾರ್ ಅಭಿನಯದ 90 ಹೊಡಿ ಮನೀಗ್ ನಡಿ ಚಿತ್ರ! - ಕಾಮಿಡಿ ಕಲಾವಿದ ವೈಜನಾಥ್​ ಬಿರಾದಾರ್​

ಹಾಸ್ಯ ನಟ ವೈಜನಾಥ್ ಬಿರಾದಾರ್ ನಟನೆಯ 90 ಹೊಡಿ ಮನೀಗ್ ನಡಿ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

Vaijanath biradar
ಬಿರಾದಾರ್​

By

Published : Mar 31, 2021, 1:34 PM IST

ಕನ್ನಡ ಚಿತ್ರರಂಗದಲ್ಲಿ ತನ್ನದೇ ಪಾತ್ರಗಳ ಮೂಲಕ ಬೇಡಿಕೆ ಹೊಂದಿರುವ ಹಾಸ್ಯ ನಟ ವೈಜನಾಥ್ ಬಿರಾದಾರ್ ತಮ್ಮ 500ನೇ ಚಿತ್ರ 90 ಹೊಡಿ ಮನೀಗ್ ನಡಿ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಸಿನಿಮಾಕ್ಕೆ ಕುಂಬಳಕಾಯಿ ಹೊಡೆದಿದೆ.

ವೈಜನಾಥ್ ಬಿರಾದಾರ್ ಜೊತೆ ಹಿರಿಯ ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ದಿ, ಅಭಯ್ ವೀರ್, ಆರ್​.ಡಿ ಬಾಬು, ವಿವೇಕ್ ಜಂಬಗಿ, ನೀತಾ, ಪ್ರೀತು ಪೂಜಾ, ರುದ್ರಗೌಡ ಬಾದರದಿನ್ನಿ, ಹೊಸಕೋಟೆ ಮುರುಳಿ, ಎಲ್ಐಸಿ ಲೋಕೇಶ್ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ.

90 ಹೊಡಿ ಮನೀಗ್ ನಡಿ ಚಿತ್ರ ತಂಡ

ಇನ್ನು ಕವಿರತ್ನ ಡಾ‌. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಕಿರಣ್ ಶಂಕರ್ & ಶಿವು ಭೇರಗಿ ಸಂಗೀತ, ರಾಕಿ ರಮೇಶ್ ಸಾಹಸ, ಯುಡಿವಿ ವೆಂಕಿ ಸಂಕಲನ ಚಿತ್ರಕ್ಕಿದೆ. ಅಮ್ಮ ಟಾಕೀಸ್ ಬಾಗಲಕೋಟೆ ಬ್ಯಾನರಿನಡಿ ತಯಾರಾಗುತ್ತಿರುವ ಈ ಸಿನಿಮಾಗೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿ ನಿರ್ದೇಶನ ಮಾಡಿದ್ದಾರೆ.

90 ಹೊಡಿ ಮನೀಗ್ ನಡಿ ಚಿತ್ರ ತಂಡ

ಹಾಸ್ಯ ಕಲಾವಿದರ ದಂಡು ಕಟ್ಟಿಕೊಂಡು ಬೆಂಗಳೂರಿನ ಮಾಗಡಿ ರಸ್ತೆಯ ಸುತ್ತಮುತ್ತ ಅಂದು ಕೊಂಡಂತೆ ಎಲ್ಲವನ್ನೂ ಚಿತ್ರೀಕರಿಸಿಕೊಂಡಿರುವ 90 ಚಿತ್ರ ತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ABOUT THE AUTHOR

...view details