ಕರ್ನಾಟಕ

karnataka

ETV Bharat / sitara

ಡ್ರಗ್ಸ್​​​ ನಂಟು​​ ಆರೋಪ: ಬಾಲಿವುಡ್​​ ಹಾಸ್ಯ ನಟಿ ಭಾರತಿ ಸಿಂಗ್ ಅರೆಸ್ಟ್​​ - ಬಾಲಿವುಡ್​​ ಹಾಸ್ಯ ನಟಿ ಭಾರತಿ ಸಿಂಗ್​​ ಬಂಧನ

ಎನ್​ಸಿಬಿ ಅಧಿಕಾರಿಗಳು ಬಾಲಿವುಡ್​​ ಹಾಸ್ಯ ನಟಿ ಭಾರತಿ ಸಿಂಗ್​​​ರನ್ನು ಅರೆಸ್ಟ್​​ ಮಾಡಿದ್ದಾರೆ.

comedian Bharti Singh arrest
ಡ್ರಗ್ಸ್​​​ ನಂಟು​​ : ಬಾಲಿವುಡ್​​ ಹಾಸ್ಯ ನಟಿ ಭಾರತಿ ಸಿಂಗ್ ಅರೆಸ್ಟ್​​

By

Published : Nov 21, 2020, 6:57 PM IST

ಬಾಲಿವುಡ್​ನಲ್ಲಿ ಡ್ರಗ್ಸ್ ಸೇವನೆ ಮತ್ತು ನಂಟು ಆರೋಪದಡಿ ಎನ್​ಸಿಬಿ ಅಧಿಕಾರಿಗಳು ಬಾಲಿವುಡ್​​ ಹಾಸ್ಯ ನಟಿ ಭಾರತಿ ಸಿಂಗ್​​​ರನ್ನು ಅರೆಸ್ಟ್​​ ಮಾಡಿದ್ದಾರೆ.

ಡ್ರಗ್ಸ್ ಪ್ರಕರಣ ಸಂಬಂಧ ಹಲವು ಬಾರಿ ದಾಳಿ ನಡೆಸಿರುವ ಎನ್​ಸಿಬಿ, ಹಲವು ನಟ - ನಟಿಯರ ಮನೆಯಲ್ಲಿ ಶೋಧ ಕಾರ್ಯ ನಡೆಸಿದೆ ಎನ್ನಲಾಗಿದೆ. ಅಲ್ಲದೆ ನಟಿ ಭಾರತಿ ಸಿಂಗ್​​​ ಹಾಗೂ ಆಕೆಯ ಪತಿ ಬ್ಯಾನ್ ಆಗಿರುವ ಔಷಧ ಬಳಕೆ ಮಾಡಿರುವ ಕುರಿತು ಮಾಹಿತಿ ದೊರಕಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ನಟ ಅರ್ಜುನ್ ರಾಮ್​​​ಪಾಲ್ ಮನೆಯಲ್ಲೂ ಶೋಧ ನಡೆಸಿದ್ದ ಎನ್​ಸಿಬಿ, ಬಳಿಕ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಬಳಿಕ ವಿಚಾರಣೆಗೆ ಹಾಜರಾಗಿದ್ದ ಅರ್ಜುನ್​ಗೆ ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.

ಚಲನಚಿತ್ರ ನಿರ್ಮಾಪಕ ಫಿರೋಜ್ ನಾಡಿಯಾವಾಲಾರನ್ನೂ ವಿಚಾರಣೆಗೆ ಕರೆಸಲಾಗಿತ್ತು. ಅವರ ಪತ್ನಿ ಶಬಾನಾ ಸಯೀದ್ ವಾಸವಿದ್ದ ಮುಂಬೈ ನಿವಾಸದಲ್ಲಿ 10 ಗ್ರಾಂನಷ್ಟು ಗಾಂಜಾ ದೊರೆತಿದ್ದ ಬಳಿಕ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು.

ABOUT THE AUTHOR

...view details